ಕಟಪಾಡಿ ಅಟೋ ಚಾಲಕನಿಂದ ಹುಲಿ ಸಂರಕ್ಷಣೆಯ ಬಗ್ಗೆ ವಿಭಿನ್ನ ಸಂದೇಶ
(Katapadi)ಕಟಪಾಡಿ; ಬದುಕಿನ ಬಂಡಿಯನ್ನು ಪೂಜಿಸುವ ಜೊತೆಗೆ ಹುಲಿಯನ್ನು ರಕ್ಷಿಸಿ (save tiger), ಎಂಬ ವಾಕ್ಯದೊಂದಿಗೆ ತಮ್ಮ ರಿಕ್ಷಾದ ಮುಂಭಾಗ ಹುಲಿಯ ಮುಖ ಮತ್ತು ಹುಲಿಯ ಉಗುರಿನ ಸ್ತಬ್ಧ ಚಿತ್ರವನ್ನು ಇರಿಸಿ ಕಟಪಾಡಿಯ ಅಟೋಚಾಲಕ ಜಯಕರ್ ಕುಂದರ್ (Jayakar Kundar)ಸ್ಥಳೀಯರ ಗಮನ ಸೆಳೆದಿದ್ದಾರೆ.
ಕಟಪಾಡಿಯ ನಿವಾಸಿ ಜಯಕರ್ ಕುಂದರ್ ವೃತ್ತಿಯಲ್ಲಿ ಆಟೋ ಚಾಲಕ ಜೊತೆಗೆ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಬಾರಿ ಸುದ್ದಿ ಮಾಡಿದ ಹುಲಿ ಉಗುರು ಕಾರಣದಿಂದಾಗಿ, ಹುಲಿ ಸಂರಕ್ಷಣೆ ಅಗತ್ಯವಾಗಿ ಮಾಡಬೇಕಿದೆ ಎನ್ನುತ್ತಾರೆ ಜಯಕರ್ ಕುಂದರ್.

