• Home  
  • 13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ, ಸೋಲಿನ ನೆಪದಲ್ಲಿ ಮನೋಸ್ತೈರ್ಯ ಕುಗ್ಗಿಸುವ ಯತ್ನ ನಡೆದಿದೆ ; ಡಿವಿಎಸ್
- ರಾಜಕೀಯ

13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ, ಸೋಲಿನ ನೆಪದಲ್ಲಿ ಮನೋಸ್ತೈರ್ಯ ಕುಗ್ಗಿಸುವ ಯತ್ನ ನಡೆದಿದೆ ; ಡಿವಿಎಸ್

Share: ಬೆಂಗಳೂರು: ಬಿಜೆಪಿ  ಪಕ್ಷದ 13 ಮಂದಿ ಸಂಸದರ ವಿರುದ್ಧ ವ್ಯವಸ್ಥಿತ ರೀತಿಯ ಅಪಪ್ರಚಾರ ನಡೆದಿದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ನೀಡಿ ಟಿಕೆಟ್‌ ನಿರಾಕರಣೆಯ ಹಬ್ಬಿಸಲಾಗುತ್ತಿದೆ.  ಇದಕ್ಕೆಲ್ಲ ರಾಷ್ಟ್ರೀಯ ನಾಯಕರು ತೆರೆ ಎಳೆಯಬೇಕಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಬೆಂಗಳೂರಿನಲ್ಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಇದರ ನಡುವಲ್ಲೇ ಚುನಾವಣೆ ಸೋಲಿನ ನೆಪದಲ್ಲಿ ನಾಯಕರ ಮನೋ ಸೈರ್ಯವನ್ನು ಕುಗ್ಗಿಸುವ ಯತ್ನ ನಡೆದಿದೆ. ಪಕ್ಷದ ನಾಯಕರನ್ನು ನಿರ್ವೀಯ್ರಗೊಳಿಸುವ ಪ್ರಯತ್ನ […]

ಬೆಂಗಳೂರು: ಬಿಜೆಪಿ  ಪಕ್ಷದ 13 ಮಂದಿ ಸಂಸದರ ವಿರುದ್ಧ ವ್ಯವಸ್ಥಿತ ರೀತಿಯ ಅಪಪ್ರಚಾರ ನಡೆದಿದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ನೀಡಿ ಟಿಕೆಟ್‌ ನಿರಾಕರಣೆಯ ಹಬ್ಬಿಸಲಾಗುತ್ತಿದೆ.  ಇದಕ್ಕೆಲ್ಲ ರಾಷ್ಟ್ರೀಯ ನಾಯಕರು ತೆರೆ ಎಳೆಯಬೇಕಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಇದರ ನಡುವಲ್ಲೇ ಚುನಾವಣೆ ಸೋಲಿನ ನೆಪದಲ್ಲಿ ನಾಯಕರ ಮನೋ ಸೈರ್ಯವನ್ನು ಕುಗ್ಗಿಸುವ ಯತ್ನ ನಡೆದಿದೆ. ಪಕ್ಷದ ನಾಯಕರನ್ನು ನಿರ್ವೀಯ್ರಗೊಳಿಸುವ ಪ್ರಯತ್ನ ನಡೆದಿದೆ. ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಬೇಕಾಗಿದೆ ಎಂದರು.

 ಈ ರೀತಿಯ ಸುದ್ದಿಯನ್ನು ಯಾರು ಹರಿಯಬಿಟ್ಟಿದ್ದಾರೋ ಗೊತ್ತಿಲ್ಲ.

ಪಕ್ಷದ 25 ಸಂಸದರ ಪೈಕಿ 13 ಸಂಸದರು ಕೆಲಸವನ್ನೇ ಮಂದಿ ಮಾಡಿಲ್ಲ. ಮುದುಕರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಾವೆಲ್ಲ ಜನರಿಂದ ಗೆದ್ದು ಬಂದವರು. ಈ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕಾದವರು ಮಾತನಾಡುತ್ತಿಲ್ಲ. ಹೀಗಾದಲ್ಲಿ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನಿರೀಕ್ಷಿತ. ಕಾಂಗ್ರೆಸಿಗೆ ರಾಜ್ಯದ ಜನತೆ ಜನಾದೇಶ ನೀಡಿದ್ದಾರೆ. ನಾವು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆಲ್ಲ ಆತ್ಮಾವಲೋಕನ ನಡೆಯುತ್ತಿತ್ತು. ಈಗೆಲ್ಲ ಆತ್ಮಾವಲೋಕನ ಮಾಡಲು ಆತ್ಮಗಳೇ ಇಲ್ಲದಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಸೋಲು ಹೊಸದಲ್ಲ.

ಹಿಂದೆ ವಾಜಪೇಯವರು ಕೂಡ ಚುನಾವಣೆ ಸೋತಿದ್ದಾರೆ. ಆನಂತರ ಗೆದ್ದು ಬಂದಿದ್ದಾರೆ. ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ತಾತ್ಕಾಲಿಕ ಹಿನ್ನಡೆಯಾಗಿದೆ. ಕಾರ್ಯಕರ್ತರ ಮನೋಬಲ ಕುಸಿಯದಂತೆ ನಾಯಕರು ನೋಡಿಕೊಳ್ಳಬೇಕಾಗಿದೆ ಎಂದೂ ಡಿವಿ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.