ಉಡುಪಿ : ಅಧಿಕಾರಕ್ಕೆ ಬಂದ ಕೇವಲ ಒಂದು ತಿಂಗಳ ಒಳಗೆ ಬಿಜೆಪಿ ಸರಕಾರದ ಎಲ್ಲವನ್ನೂ ಬದಲಿಸಲು ಸರಕಾರ ಹೊರಟಿದೆ. ಪಠ್ಯಪುಸ್ತಕ ಪರಿಷ್ಕರಣೆಯನ್ನು ಬಿಜೆಪಿ ಸರಕಾರ ಮಾಡಿದ್ದು, ಅದನ್ನು ಮತ್ತೆ ಬದಲಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಬಾರದು ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಆರೆಸ್ಸೆಸ್ ಸಂಸ್ಥಾಪಕ ಹೆಗಡೆವಾರ್ ಪಠ್ಯವನ್ನು ಕೈಬಿಡುವ ಸರಕಾರದ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯವಾದಿ ವಿಚಾರಗಳನ್ನು ನಾವು ಸೇರಿಸಿದ್ದೇವೆ.
ದೇಶದ ಸಂಸ್ಕೃತಿಯನ್ನು ಬಿಂಬಿಸುವ ವಿಚಾರಗಳನ್ನು ಅಳವಡಿಸಿದ್ದೇವೆ. ಅದನ್ನು ಕೈಬಿಟ್ಟು ಮಕಾಲೆ ಶಿಕ್ಷಣವನ್ನೇ ಮತ್ತೆ ಅಳವಡಿಕೆ ಮಾಡುವುದು ಸರಿಯಲ್ಲ.
ಗಾಂಧಿ ಕುಟುಂಬವನ್ನು ಮೆಚ್ಚಿಸಲು ಸಿದ್ದರಾಮಯ್ಯನವರ ಸರಕಾರ ಮಕಾಲೆ ಶಿಕ್ಷಣ ಪದ್ಧತಿ ಮುಂದುವರೆಸಲು ಹೊರಟಿದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

