ಸೆ.5 ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ "ಮೆಟ್ರೋಮ್ಯಾನ್" ಖ್ಯಾತಿಯ ಇ. ಶ್ರೀಧರನ್‌ರವರಿಗೆ ಚಾರ್ಜ್ ಫರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ 2024 (Sept 5th ‘Metro man’ fame E Shridharan got George Fernandes National Award 2024)
ಸೆ. 5 ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ “ಮೆಟ್ರೋಮ್ಯಾನ್” ಖ್ಯಾತಿಯ ಇ. ಶ್ರೀಧರನ್‌ರವರಿಗೆ ಚಾರ್ಜ್ ಫರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ 2024
(Mumbai) ಮುಂಬೈ: ಪರಿಸರ ಪ್ರೇಮಿ ಸಂಘಟನೆಯಾದ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಆಯೋಜನೆಯಲ್ಲಿ ಸಪ್ಟೆಂಬರ್ ಐದರಂದು ಸಂಜೆ 5:00ಗೆ ಮುಂಬೈಯ ಕುರ್ಲ ಪೂರ್ವದಲ್ಲಿರುವ ಬಂಟರ ಭವನದ ಸಭಾಭವನದಲ್ಲಿ ಮಾಜಿ ರಕ್ಷಾ ಮಂತ್ರಿ ದಿ. ಚಾರ್ಜ್ ಫೆರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಬಾರಿಯ ಚಾರ್ಜ್ ಫೆರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ -2024 ನ್ನು “ಮೆಟ್ರೋಮ್ಯಾನ್” ಖ್ಯಾತಿಯ ಪದ್ಮವಿಭೂಷಣ ಇ. ಶ್ರೀಧರನ್ ರವರಿಗೆ ಪ್ರಧಾನಿಸಲಾಗುವುದು ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ರೈಲ್ವೆ ಖ್ಯಾತಿಯ ಸಚಿವ ವಿ ಸೋಮಣ್ಣ ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿ, ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭುರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀ ಕೃಷ್ಣ ಪರಿಸರ ಸಮಿತಿಯ ಅಧ್ಯಕ್ಷ ಎಲ್ ವಿ. ಅಮೀನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ಗೋಪಾಲ ಶೆಟ್ಟಿ, ಸಿ ಎಂ ಡಿ ಅರ್ಗಾನಿಕ್ ಸಂಸ್ಥೆಯ ಆನಂದ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಿ ಎಸ್ ಕೆ ಪಿ ಅಧ್ಯಕ್ಷ ಡಾ. ಸುರೇಶ್ ಎಸ್ ರಾವ್, ಮುಂಬೈ ಬಿಲ್ಲವರ ಎಸೋಶಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅನಿವಾಸಿ ಭಾರತೀಯ ಅಧ್ಯಕ್ಷ ಲೆ. ಜ. ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಮಿತಿಯ ಗೌರವ ಅಧ್ಯಕ್ಷ ಪದ್ಮವಿಭೂಷಣ ಡಾ. ಬಿ ಎಂ ಹೆಗ್ಡೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸಮಿತಿಯ ಉಡುಪಿ- ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಡಿ ಆರ್. ರಾಜು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

