ಸಚ್ಚರಿಪೇಟೆ ಮುತ್ತಮ್ಮ ಪೂಜಾರ್ತಿ ನಿಧನ
(Belman) ಬೆಳ್ಮಣ್: ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಮುಂಡ್ಕೂರು ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಸಚ್ಚರಿಪೇಟೆ ಅವರ ಮಾತೃಶ್ರೀ ಮುತ್ತಮ್ಮ ಪೂಜಾರ್ತಿ (79) ಶುಕ್ರವಾರ ಸಂಜೆ ಅಲ್ಪಕಾಲದ ಅಸೌಖ್ಯದಿಂದ ದೈವಧೀನರಾಗಿದ್ದಾರೆ.
ಮೃತರು ಪುತ್ರ ಹರೀಶ್ ಸಚ್ಚರಿಪೇಟೆ ಸಹಿತ ನಾಲ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಶುಕ್ರವಾರ ಬೆಳಿಗ್ಗೆ ನೆರವೇರಿತು.

