• Home  
  • ಮಣಿಪಾಲ: ಅಪಾಯಕಾರಿ, ಅತೀವೇಗ, ನಿರ್ಲಕ್ಷ್ಯತನದಕಾರುಚಾಲನೆ, ಕಾರುಸಮೇತ ಯುವಕಪೊಲೀಸ್‌ ವಶ (Manipal: Police arrest young man with car for dangerous, speeding, reckless driving)
- ಅಪರಾಧ

ಮಣಿಪಾಲ: ಅಪಾಯಕಾರಿ, ಅತೀವೇಗ, ನಿರ್ಲಕ್ಷ್ಯತನದಕಾರುಚಾಲನೆ, ಕಾರುಸಮೇತ ಯುವಕಪೊಲೀಸ್‌ ವಶ (Manipal: Police arrest young man with car for dangerous, speeding, reckless driving)

Share: ಮಣಿಪಾಲ: ಅಪಾಯಕಾರಿ, ಅತೀ ವೇಗ, ನಿರ್ಲಕ್ಷ್ಯತನದ ಕಾರು ಚಾಲನೆ,  ಕಾರು ಸಮೇತ  ಯುವಕ ಪೊಲೀಸ್‌ ವಶ (Manipala) ಮಣಿಪಾಲ: ಅಪಾಯಕಾರಿಯಾಗಿ  ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ ಮಾಡಿದ ಕೇರಳ ಮೂಲದ ಯುವಕನನ್ನು ಪೊಲೀಸರು ಮಣಿಪಾಲ ಎಂಐಟಿ ಬಳಿ ವಶಕ್ಕೆ ಪಡೆದಿದ್ದಾರೆ.  ಕೇರಳ ಮೂಲದ ಚಾಲಕ ಶೋಹೈಲ್‌ ನೀಲಾಕತ್‌(26) ಬಂಧಿತ ವ್ಯಕ್ತಿ. ಕೇರಳ ಕಣ್ಣೂರು ಮೂಲದ ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ […]

(Manipala) ಮಣಿಪಾಲ: ಅಪಾಯಕಾರಿಯಾಗಿ  ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ ಮಾಡಿದ ಕೇರಳ ಮೂಲದ ಯುವಕನನ್ನು ಪೊಲೀಸರು ಮಣಿಪಾಲ ಎಂಐಟಿ ಬಳಿ ವಶಕ್ಕೆ ಪಡೆದಿದ್ದಾರೆ.

 ಕೇರಳ ಮೂಲದ ಚಾಲಕ ಶೋಹೈಲ್‌ ನೀಲಾಕತ್‌(26) ಬಂಧಿತ ವ್ಯಕ್ತಿ.

ಕೇರಳ ಕಣ್ಣೂರು ಮೂಲದ ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12AB H5 9440 ನಂಬರ್ ನ ಆಕಾಶ ನೀಲಿ ಬಣ್ಣದ ಕಾರನ್ನು ಸಂಪೂರ್ಣ ಟಿಂಟ್‌ ಅಳವಡಿಸಿಕೊಂಡು ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಡ್ರೈವ್ ಮಾಡಿದ್ದ.

   ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ  ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ.  ಈ ವೇಳೆ ಮಣಿಪಾಲ ಪೊಲೀಸ್‌ ಠಾಣೆ   ಸಿಬ್ಬಂದಿ ಹಿಂಬಾಲಿಸಿ ಎಂಐಟಿ ಜಂಕ್ಷನ್‌ ಬಳಿ ಕಾರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.