ಬೆಳಪು ಗ್ರಾಮ ಪಂಚಾಯತ್ ; ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ
ಕಾಪು, ಫೆ. 26 : ಬೆಳಪು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಶ್ರೀನಿವಾಸ ಹಾಸ್ಪಿಟಲ್ ಮುಕ್ಕ – ಸುರತ್ಕಲ್, ಜಿಲ್ಲಾ ಅಂಧತ್ವ ವಿಭಾಗ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬೆಳಪು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಬೆಳಪು ಹಿಂಡೋಕೇರ್ ಇಂಡಸ್ಟಿçÃಸ್ನ ಆಡಳಿತ ನಿರ್ದೇಶಕ ಕ್ರಿರ್ಸ್ಟೆನ್ ನೋಯಲ್ ಫರಿಯಾಸ್ ಮತ್ತು ರಚನಾ ಫರಿಯಾಸ್ ದಂಪತಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಎಲ್ಲಾ ಭಾಗ್ಯಗಳಿಂತಲೂ ಆರೋಗ್ಯ ಭಾಗ್ಯ ಮನುಷ್ಯನಿಗೆ ಅತೀ ಅಗತ್ಯವಾಗಿದೆ. ತಾಲೂಕು ಆಸ್ಪತ್ರೆಗೆ ಎರಡು ಎಕರೆ ಜಾಗವನ್ನು ಮೀಸಲಿಟ್ಟು, ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ಇನ್ನೂ ಮೂರು ಎಕರೆ ಜಾಗ ಸಹಿತ ಒಟ್ಟು ಐದು ಎಕರೆ ಜಾಗವನ್ನು ಒದಗಿಸಿಕೊಟ್ಟಲ್ಲಿ ತಾಲೂಕು ಆಸ್ಪತ್ರೆ ಮಂಜೂರು ಮಾಡುವುದಾಗಿ ಸರಕಾರ ಮತ್ತು ಆರೋಗ್ಯ ಇಲಾಖೆಯಿಂದ ಭರವಸೆ ದೊರಕಿದೆ. ಗ್ರಾಮದ ಜನತೆಯ ಅನುಕೂಲಕ್ಕಾಗಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ವೈದ್ಯಕೀಯ ಶಿಬಿರ, ತಪಾಸಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಶಶಿರಾಜ್ ಶೆಟ್ಟಿ ಮಾತನಾಡಿ, ಮಂಗಳೂರು ಮತ್ತು ಉಡುಪಿ ನಡುವಿನ ಜನರ ಪಾಲಿಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯು ಇಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಗುರುತಿಸಲ್ಪಡುತ್ತಿದೆ. ಇಲ್ಲಿ ನುರಿತ ವೈದ್ಯರಿಂದ ಉತ್ತಮ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು ಈಎಸ್ಐ, ಆಯುಷ್ಮಾನ್, ಅಧಾರ್ ಕಾರ್ಡ್, ಸುರಕ್ಷಾ ಯೋಜನೆಗಳ ಸಹಿತವಾಗಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳ ಆರೋಗ್ಯ ಕಾರ್ಡ್ಗಳಿಗೂ ಸಂಬಧಪಟ್ಟು ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಉಡುಪಿ ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ| ನಿತ್ಯಾನಂದ ನಾಯಕ್, ಶೋಭಾ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರವೀಂದ್ರ, ಬೆಳಪು ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಅನುಪೂರ್ವಿ ಸಂಸ್ಥೆಯ ಆಡಳಿತ ನಿರ್ದೇಶಕ ಹರೀಶ್ ನಾಯಕ್ ಕಾಪು, ಉದ್ಯಮಿ ಮುಶ್ತಾಕ್ ಅಹಮದ್ ಬೆಳಪು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗ್ರಾ. ಪಂ. ಸದಸ್ಯರಾದ ಪ್ರಕಾಶ್ ರಾವ್, ಸುಲೇಮಾನ್, ಸೌಮ್ಯ ಸುರೇಂದ್ರ, ರೂಪಾ ಆಚಾರ್ಯ, ಉಷಾ ವಾಸು, ಅನಿತಾ ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ನೂರಾರು ಮಂದಿ ಗ್ರಾಮಸ್ಥರು ಪಾಲ್ಗೊಂಡು ವಿವಿಧ ಆರೋಗ್ಯ ತಪಾಸಣೆ, ಚಿಕಿತ್ಸೆ, ವೈದ್ಯಕೀಯ ಸಲಹೆ ಮತ್ತು ಔಷಧಿ ಪಡೆದುಕೊಂಡರು.
ಬೆಳಪು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುರೇಶ್ ಕುಮಾರ್ ಸ್ವಾಗತಿಸಿದರು.
ಬೆಳಪು ಉಪಕೇಂದ್ರ ಸಮುದಾಯ ಅಧಿಕಾರಿ ದಿವ್ಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

