ಪಾಂಗಾಳ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಕಾರು ಚಾಲಕ ಸಾವು.(Accident at Pangala : Driver died)
(Kaup) ಕಾಪು : ಬುಧವಾರ ಸಂಜೆ ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದು, ಕಾರು ಚಾಲಕ ಮೃತಪಟ್ಟ ಘಟನೆ ಸಂಭವಸಿದೆ.
ಮೃತ ಕಾರು ಚಾಲಕ ನಾಗೇಶ್ (70) ಎಂದು ಗುರುತಿಸಲಾಗಿದೆ.
ಕಾಪುವಿನ ಮೆಸ್ಕಾಂ ಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಇವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಕಾಪು ಎಸೈ ಅಬ್ದುಲ್ ಖಾದರ್, ಕ್ರೈಂ ಎಸೈ ಪುರುಷೋತ್ತಮ್ ಹಾಗೂ
ಪೋಲಿಸರು, ಹೆದ್ದಾರಿ ಗಸ್ತು ಪಡೆ ಆಗಮಿಸಿದ್ದು, ಕಾರು ಹಾಗು ಲಾರಿಯನ್ನು ತೆರವುಗೊಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

