• Home  
  • ಪಂಚವರ್ಣ ಸ್ವಚ್ಚತಾ ಕಾರ್ಯಕ್ಕೆ ವಿಪಕ್ಷ ನಾಯಕ ಕೋಟ ಪ್ರಶಂಸೆ (Panchavarna Kota)
- social service

ಪಂಚವರ್ಣ ಸ್ವಚ್ಚತಾ ಕಾರ್ಯಕ್ಕೆ ವಿಪಕ್ಷ ನಾಯಕ ಕೋಟ ಪ್ರಶಂಸೆ (Panchavarna Kota)

Share: ಪಂಚವರ್ಣ ಸ್ವಚ್ಚತಾ ಕಾರ್ಯಕ್ಕೆ ವಿಪಕ್ಷ ನಾಯಕ ಕೋಟ ಪ್ರಶಂಸೆ (Kota) ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಇದರ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ  ಕೋಟ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ199ನೇ ವಾರದ ಸಂಭ್ರಮ ಈ ಹಿನ್ನೆಲೆಯಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾಕ್೯ ರಸ್ತೆಯ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿತು.  ಈ ವೇಳೆ ಭೇಟಿ ನೀಡಿದ […]

ಪಂಚವರ್ಣ ಸ್ವಚ್ಚತಾ ಕಾರ್ಯಕ್ಕೆ ವಿಪಕ್ಷ ನಾಯಕ ಕೋಟ ಪ್ರಶಂಸೆ

(Kota) ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಇದರ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ  ಕೋಟ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ199ನೇ ವಾರದ ಸಂಭ್ರಮ ಈ ಹಿನ್ನೆಲೆಯಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾಕ್೯ ರಸ್ತೆಯ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿತು.

 ಈ ವೇಳೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪಂಚವರ್ಣ ಸೇರಿದಂತೆ ವಿವಿಧ ಸಂಘಟನೆಗಳ ನಿರಂತರ ಸ್ವಚ್ಚತಾ ಅಭಿಯಾನವನ್ನು ಕೊಂಡಾಡಿದರು.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ದೇಶವನ್ನು ಸ್ವಚ್ಛವಾಗಿರಿಸಲು ಅಂದು ಪೊರಕೆ ಹಿಡಿದರು. ತದನಂತರ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಯುವ ಸಮುದಾಯದಿಂದ ಹಿಡಿದು ವಯಸ್ಕರು ಈ ಆಂದೋಲನವನ್ನು ಉಸಿರಾಗಿಸಿ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ. ಅದರಲ್ಲೂ ಪಂಚವರ್ಣ ಇತರ ಸಂಸ್ಥೆಯ ಕಾರ್ಯ ನಿಜಕ್ಕೂ ಕಾರಂತರೂರಿಗೆ ಮುನ್ನಡಿ ಬರೆಯಲು ಕಾರಣವಾಗಿದೆ ಎಂದು ಬರುವ ವಾರದ 200ನೇ ಅಭಿಯಾನಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಸಂಚಾಲಕಿ ಸುಜಾತ ಬಾಯರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಪ್ತಸಹಾಯಕ ರಾಘವೇಂದ್ರ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.