• Home  
  • ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (DK DIST Development is my biggest dream : capt. Brijesh Chawta)
- ರಾಜಕೀಯ

ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (DK DIST Development is my biggest dream : capt. Brijesh Chawta)

Share: ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (Moolki)ಮೂಲ್ಕಿ: ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದ್ದು, ನಮ್ಮ ಯುವಕರಿಗೆ ಉದ್ಯೋಗ, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಬೇಕಾದ ಎಲ್ಲ ರೀತಿಯ ವೇದಿಕೆ ನಿರ್ಮಾಣ ಮಾಡಲು ನಾನು ಕಟಿಬದ್ಧನಾಗಿದ್ದೇನೆಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (DK BJP Candidate Brijesh Chauta)ಹೇಳಿದರು.  ಅವರು ಮುಲ್ಕಿ ಆಧಿಧನ್ ಸಂಕೀರ್ಣದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, […]

ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದೆ: ಕ್ಯಾಪ್ಟನ್ಬ್ರಿಜೇಶ್ಚೌಟ

(Moolki)ಮೂಲ್ಕಿ: ಸಮಗ್ರ ದಕ್ಷಿಣ ಕನ್ನಡ ಅಭಿವೃದ್ಧಿ ನನ್ನ ಬಹುದೊಡ್ಡ ಕನಸಾಗಿದ್ದು, ನಮ್ಮ ಯುವಕರಿಗೆ ಉದ್ಯೋಗ, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಬೇಕಾದ ಎಲ್ಲ ರೀತಿಯ ವೇದಿಕೆ ನಿರ್ಮಾಣ ಮಾಡಲು ನಾನು ಕಟಿಬದ್ಧನಾಗಿದ್ದೇನೆಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ (DK BJP Candidate Brijesh Chauta)ಹೇಳಿದರು.

 ಅವರು ಮುಲ್ಕಿ ಆಧಿಧನ್ ಸಂಕೀರ್ಣದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವನಾಯಕರುಗಳು ಚಕಿತಪಡುವ ರೀತಿಯಲ್ಲಿ ಭಾರತ ದೇಶವನ್ನು ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ತಮ್ಮ ಪ್ರಾಮಾಣಿಕತೆಯ ಆಡಳಿತದ ಮೂಲಕ ದೇಶವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಮುಂದುವರಿಸಿದ್ದಾರೆ̤ ಅವರ ಜನಪರ ಯೋಜನೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜನರಿಗೆ ಮುಟ್ಟಿಸಲು  ಪ್ರಯತ್ನಿಸುತ್ತೇನೆ ಹಾಗೂ ಸಂಘಟನೆಯನ್ನು ಬಲಪಡಿಸುವ ಮೂಲಕ ಕಾರ್ಯಕರ್ತರ ನಿಲುವುಗಳನ್ನು ಪಡೆದು ಪ್ರಾದೇಶಿಕವಾಗಿ ವಿವಿಧ ಕ್ಷೇತ್ರದ ಸಾಧಕರೊಂದಿಗೆ ಮಾಹಿತಿ ಪಡೆದು, ಅಭಿವೃದ್ಧಿಯ ಗುರಿ ಸಾಧಿಸಲು ಪ್ರಯತ್ನಿಸುತ್ತೇನೆ. ಹಿಂದುತ್ವದ ಬದ್ದತೆಯೊಂದಿಗೆ ಅಭಿವೃದ್ಧಿಯ ಆದ್ಯತೆಯ ಸೇವೆ ನೀಡುವ ಯೋಜನೆ ಕೈಗೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್ (Moolki – Moodabidri MLA Umanatha Kotian)  ಮಾತನಾಡಿ, ದೇಶ ಸೇವೆ ಸಲ್ಲಿಸಿ, ಇಂದು ಸಾರ್ವಜನಿಕ ಸೇವೆಗೆ ನಮ್ಮ ಕ್ಯಾಪ್ಟನ್‌ ಬೃಜೇಶ್‌ ಚೌಟ ಇಳಿದಿದ್ದು, ನಮ್ಮೆಲ್ಲರಿಗೂ ಸಂತಸ ತಂದಿದೆ. ಈ ಭಾಗದ ಜನರ ಕಷ್ಟ, ನೋವು-ನಲಿವುಗಳನ್ನು ಹತ್ತಿರದಿಂದ ಬಲ್ಲವರು. ಕನ್ನಡ, ತುಳು, ಇಂಗ್ಲೀಷ್‌, ಹಿಂದಿಯನ್ನು ಸುಲಲಿತವಾಗಿ ಮಾತನಾಡುವ ಇಂತಹ ಒಬ್ಬ ವಿದ್ಯಾವಂತ ನಮ್ಮನ್ನು ಅತ್ಯಂತ ಸಮರ್ಥವಾಗಿ ಲೋಕಸಭೆಯಲ್ಲಿ ಪ್ರತಿನಿಧಿಸಬಲ್ಲರು ಎಂದರು.

ಮೂಡುಬಿದಿರೆಯ ಜೈನಮಠ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ, ಮುಲ್ಕಿಯ ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ, ಆಶೀರ್ವಾದ ಪಡೆದು, ವಿವಿಧ ಮಂಡಲಗಳ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.

 ಈ ಸಂಧರ್ಭ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ‌ ನಾಯಕರುಗಳಾದ ಸುನಿಲ್ ಆಳ್ವಾ, ಸುದರ್ಶನ್ ಮೂಡುಬಿದಿರೆ, ದಿನೇಶ್ ಪುತ್ರನ್, ಈಶ್ವರ್ ಕಟೀಲ್, ರಂಜಿತ್ ಪೂಜಾರಿ, ಹರಿಪ್ರಸಾದ್, ಭಾಸ್ಕರ್ ಆಚಾರ್, ಸುಚರಿತ ಶೆಟ್ಟಿ,  ಶಾಂತಿ ಪ್ರಸಾದ್ ಹೆಗ್ಡೆ, ಚಂದ್ರಶೇಖರ  ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.