• Home  
  • ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಸಾಮೂಹಿಕ‌ ವಿವಾಹ: ವೈವಾಹಿಕ ಜೀವನಕ್ಕೆ ಕಾಲಿಟ್ಟ 6 ಜೋಡಿ (Mass wedding from Punjalukatte Swastik friends club)
- social service

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಸಾಮೂಹಿಕ‌ ವಿವಾಹ: ವೈವಾಹಿಕ ಜೀವನಕ್ಕೆ ಕಾಲಿಟ್ಟ 6 ಜೋಡಿ (Mass wedding from Punjalukatte Swastik friends club)

Share: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಸಾಮೂಹಿಕ‌ ವಿವಾಹ: ವೈವಾಹಿಕ ಜೀವನಕ್ಕೆ ಕಾಲಿಟ್ಟ 6 ಜೋಡಿ  ಬಂಟ್ವಾಳ: ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ  6 ಜೋಡಿ ವೈವಾಹಿಕ ಜೀವನಕ್ಕೆ ಪಾದರ್ಪಣೆಗೈದರು.ವೇ.ಮೂ.ಶ್ರೀ ಕೃಷ್ಣಭಟ್ ಕಾರ್ಕಳ ಮತ್ತವರ ತಂಡ ವಿವಾಹದ ವೈಧಿಕ ವಿಧಿವಿದಾನ ನೆರವೇರಿಸಿದರು.  ನೆರೆದ ಗಣ್ಯರು,ವಧು-ವರರ ಕುಟುಂಬಿಕರು ನೂತನ ವಧು- ವರರಿಗೆ ಶುಭ ಹಾರೈಸಿದರು.ಬಳಿಕ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ‌ ಶಾರದಾ […]

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಸಾಮೂಹಿಕ‌ ವಿವಾಹ: ವೈವಾಹಿಕ ಜೀವನಕ್ಕೆ ಕಾಲಿಟ್ಟ 6 ಜೋಡಿ 

ಬಂಟ್ವಾಳ: ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ  6 ಜೋಡಿ ವೈವಾಹಿಕ ಜೀವನಕ್ಕೆ ಪಾದರ್ಪಣೆಗೈದರು.
ವೇ.ಮೂ.ಶ್ರೀ ಕೃಷ್ಣಭಟ್ ಕಾರ್ಕಳ ಮತ್ತವರ ತಂಡ ವಿವಾಹದ ವೈಧಿಕ ವಿಧಿವಿದಾನ ನೆರವೇರಿಸಿದರು.

 ನೆರೆದ ಗಣ್ಯರು,ವಧು-ವರರ ಕುಟುಂಬಿಕರು ನೂತನ ವಧು- ವರರಿಗೆ ಶುಭ ಹಾರೈಸಿದರು.
ಬಳಿಕ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ‌ ಶಾರದಾ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಸಾಧಕರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ  ಮತ್ತು “ಸ್ವಸ್ತಿಕ್ ಸಂಭ್ರಮ” ಪುರಸ್ಕಾರಗೈದ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ (EX Minister Nagaraj Shetty)ಮಾತನಾಡಿ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಯ ಮೂಲಕ ಗುರುತಿಸಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ದಾನಿಗಳ ಸಹಕಾರ ಪಡೆದು ನಡೆಸುತ್ತಿರುವ ಸಾಮೂಹಿಕ ವಿವಾಹ ಕಾರ್ಯ ಪುಣ್ಯದ ಕೆಲಸ, ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಸಹಕಾರ ರತ್ನ ಲ.ಎ. ಸುರೇಶ್ ರೈ ಶುಭ ಹಾರೈಸಿದರು.
ಮಾವಿನಕಟ್ಟೆ ಉದ್ಯಮಿ ಅಬ್ದುಲ್ ಕುಂಞಿ, ಬೆಳ್ತಂಗಡಿ ಮಂಜುಶ್ರೀ ಜೆಸಿಐ ಅಧ್ಯಕ್ಷ ರಂಜಿತ್ ಹೆಚ್.ಡಿ., ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯ ಮೋಹನದಾಸ ಕೊಟ್ಟಾರಿ, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ಪಿಲಾತಬೆಟ್ಟು ಕೃಷಿ ಪತ್ತಿನ ನಿರ್ದೇಶಕ ಸುಂದರನಾಯ್ಕ್, ಕೇರಳ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಅಜಿತ್ ಕುಮಾರ್, ಬಡಗ ಕಜೆಕಾರು ಗ್ರಾ.ಪಂ.ಅಧ್ಯಕ್ಷ  ದೇವದಾಸ ಅಬುರ, ಉದ್ಯಮಿ ಇರ್ವತ್ತೂರು ಶೇಖರ ಪೂಜಾರಿ, ಪಿಲಾತಬೆಟ್ಟು ಕೃಷಿ ಪತ್ತಿನ ಉಪಾಧ್ಯಕ್ಷ ರವಿಶಂಕರ ಹೊಳ್ಳ, ಲಕ್ಷ್ಮೀಶ್ ಉಡುಪಿ, ಶಂಕರ ಶೆಟ್ಟಿ, ಗಿರೀಶ್ ಸಾಲಿಯಾನ್, ಮುಂಬೈ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ, ಉದ್ಯಮಿ ಜಯಚಂದ್ರ ಬೊಳ್ಮಾರ್, ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮೊದಲಾದವರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ (MLA Rajesh Naik) ಉಳಿಪಾಡಿಗುತ್ತು ಅವರು ನೂತನ ವಧು-ವರರಿಗೆ ಶುಭಹಾರೈಸಿದರು.
ವೈಭವದ ಮೆರವಣಿಗೆ:
ಬೆಳಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ  ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವೈಭವಯುತವಾದ ವಧು-ವರರ ದಿಬ್ಬಣ ಮೆರವಣಿಗೆ ನಡೆಯಿತು.

ಸಜೀಪಮುನ್ನೂರು ಮೂರ್ತೆದಾರರ ಸೇ.ಸ.ಸಂಘದ ಅಧ್ಯಕ್ಷ ಸಂಜೀವಪೂಜಾರಿ ಅವರ ಉಪಸ್ಥಿತಿಯಲ್ಲಿ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಮೆರವಣಿಗೆಗೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ  ವಿವಿಧ ಕ್ಷೇತ್ರದ ಸಾಧಕರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ ಪ್ರದಾನ ಮತ್ತು “ಸ್ವಸ್ತಿಕ್ ಸಂಭ್ರಮ” ಪುರಸ್ಕಾರ ವಿತರಿಸಲಾಯಿತು. ಹಾಗೆಯೇ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯ ಮೋಹನದಾಸ ಕೊಟ್ಟಾರಿ, ಯಕ್ಷವಾಸವ್ಯಂ ಸಂಚಾಲಕಿ ಸಾಯಿಸುಮ ನಾವುಡ ಕಾರಿಂಜ ಅವರನ್ನು ಅಭಿನಂದಿಸಲಾಯಿತು. 

 ಕುಣಿತ ಭಜನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರು ಪ್ರಸ್ತಾವನೆಗೈದು ಕ್ಲಬ್ ವತಿಯಿಂದ ಇದುವರೆಗೆ 470 ಜೋಡಿಗೆ ವಿವಾಹ ನಡೆಸಲಾಗಿದೆ. 40 ವರ್ಷಗಳ ಕಾಲ ಕಬಡ್ಡಿ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲೆಮರೆ ಕಾಯಿಯಂತಿರುವ ಹಲವಾರು ಸಾಧಕರನ್ನು ಗುರುತಿಸುವ ಕಾರ್ಯ ನಡೆಸಲಾಗಿದೆ ಎಂದರು.

ಮಾಜಿ ಅಧ್ಯಕ್ಷ  ಪ್ರಭಾಕರ  ಪಿ.ಎಂ.ಸ್ವಾಗತಿಸಿದರು‌. ಕಲಾವಿದ ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನದ ಬಳಿಕ ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಡ್ಯಾನ್ಸ್ ಪರ್ಬ  ನಡೆಯಿತು. 
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ:

ಇದೇವೇಳೆ  ಸಂತೋಷ್ ಕುಮಾರ್ ತುಂಬೆ(ಶಿಕ್ಷಣ ), ಅನ್ವೇಷ್ ಆರ್.ಶೆಟ್ಟಿ (ಯಕ್ಷಗಾನ), ಸದಾನಂದ ಅಮೀನ್ ಮಲ್ಪೆ (ಉದ್ಯಮ), ರಾಜು ಮಣಿಹಳ್ಳ(ದೈವ ನರ್ತನ), ಹಂಝ ಬಸ್ತಿಕೋಡಿ (ಸಮಾಜ ಸೇವೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ‌ ಮಾಡಲಾಯಿತು.

ಅದೇರೀತಿ ಮನೋಜ್ ಕನಪಾಡಿ (ಕಲೆ), ಭಾಸ್ಕರ ರಾವ್‌ಬಿ.ಸಿ. ರೋಡ್(ಸಂಗೀತ), ಹೇಮಚಂದ್ರ ಸಿದ್ದಕಟ್ಟೆ( ಸಂಘಟನೆ), ಸಂದೀಪ್ ಸಾಲ್ಯಾನ್(ಪತ್ರಕರ್ತ), ಚಂದ್ರಪ್ಪ ಮದ್ದಡ್ಕ (ಶಿಕ್ಷಣ)ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 

 ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಂಟ್ವಾಳ ಹೋಬಳಿ ಮಟ್ಟದ ಪುರಸಭಾ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ನೇತೃತ್ವದ ಪ್ಲೈಯಿಂಗ್ ಸ್ಕಾಡ್ ತಂಡ ಸಾಮೂಹಿಕ ವಿವಾಹದ ಇಡೀ ಕಾರ್ಯಕ್ರಮದ ಬಗ್ಗೆ ನಿಗಾ ಇರಿಸಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.