ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಸಭೆ
ಪಡುಬಿದ್ರಿ, ಮಾ. 25: ಒಗ್ಗಟ್ಟಾಗಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಮಾಡೋಣ. ಆಪ್ಯಾಯಮಾನವಾಗಿ ಭಕ್ತರಿಗೆ ಬೇಕಾದಂತೆ ದೇವಸ್ಥಾನದ ಪುನರ್ ನಿರ್ಮಾಣವಾಗಲಿದೆ ಎಂದು ಶ್ರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೆ. ಶೆಟ್ಟಿ (Banjara Prakash Shetty)ಹೇಳಿದರು.
ಅವರು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯು ಕರೆಕೊಟ್ಟಿದ್ದ ಗ್ರಾಮಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು (Rathakar Raj Arasu Kinnakak Ballal) ಭಕ್ತಾದಿಗಳ ಸಂಶಯಕ್ಕುತ್ತರಿಸಿದರು.
ಇನ್ನೋರ್ವ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ (Petemane Bhavani Shankar Hegde) ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ, ಗ್ರಾಮಸ್ಥರಾದ ಮುರಳೀನಾಥ ಶೆಟ್ಟಿ, ಸದಾಶಿವ ಆಚಾರ್ಯ, ನರೇಂದ್ರ ಸ್ವಾಮಿ ಮಾತನಾಡಿದರು.
ಸಭೆಯಲ್ಲಿ ಶ್ರೀ ದೇಗುಲದ ಜೀರ್ಣೋದ್ಧಾರ ಕುರಿತಾದ ಸಮಿತಿಯ ಮನವಿಯನ್ನು ಓದಿ ಹೇಳಲಾಯಿತು. ವಿವಿಧ ಸಮಿತಿಗಳ ಸದಸ್ಯರ ವಿವರವನ್ನೂ ಓದಿ ಹೇಳಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಸ್ವಾಗತಿಸಿದರು.
ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ವರದಿ ವಾಚಿಸಿದರು. ಶ್ರೀಧರ ಆಚಾರ್ಯ ನಿರ್ವಹಿಸಿ ವಂದಿಸಿದರು.

