• Home  
  • ಆರ್ ಟಿಐ ಕಾರ್ಯಕರ್ತ ಸಾವಂತ್ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ‌ (RTI Activist Sawanth scicide case : Demand for comprehensive investigation
- ಅಪರಾಧ

ಆರ್ ಟಿಐ ಕಾರ್ಯಕರ್ತ ಸಾವಂತ್ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ‌ (RTI Activist Sawanth scicide case : Demand for comprehensive investigation

Share: ಆರ್ ಟಿಐ ಕಾರ್ಯಕರ್ತ ಸಾವಂತ್ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ‌  (Bantwala) ಬಂಟ್ವಾಳ: ಆರ್ ಟಿಐ ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಪದ್ಮನಾಭ ಸೇವಂತ (ಸಾವಂತ್) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಅವರ ಕುಟುಂಬಕ್ಕೆ‌ನ್ಯಾಯ ಒದಗಿಸಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಗ್ರಹಿಹಿಸಿದೆ. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ‌ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದಜಿ.ಪಂ. ಮಾಜಿ ಸದಸ್ಯ‌ ಚಂದ್ರಪ್ರಕಾಶ್ […]

ಆರ್ ಟಿಐ ಕಾರ್ಯಕರ್ತ ಸಾವಂತ್ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ

 (Bantwala) ಬಂಟ್ವಾಳ: ಆರ್ ಟಿಐ ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಪದ್ಮನಾಭ ಸೇವಂತ (ಸಾವಂತ್) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಅವರ ಕುಟುಂಬಕ್ಕೆ‌ನ್ಯಾಯ ಒದಗಿಸಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಗ್ರಹಿಹಿಸಿದೆ.
 ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ‌ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ
ಜಿ.ಪಂ. ಮಾಜಿ ಸದಸ್ಯ‌ ಚಂದ್ರಪ್ರಕಾಶ್ ಶೆಟ್ಟಿ,
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಮಾಜಿ ಸಚಿವ ರಮಾನಾಥ ರೈ (Ex Minister Ramanath Rai)ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಈ ಬಗ್ಗೆ ತನಿಖೆಗೆ ಒತ್ರಾಯಿಸಲಾಗುವುದು. ಹಾಗೆಯೇ ಗೃಹ ಮಂತ್ರಿಯವರಿಗೂ ಮನವಿ ಸಲ್ಲಿಸಲಾಗುವುದು ಎಂದರು.
ಮೃತದೇಹವನ್ನು ಗಮನಿಸಿದಾಗ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ. ಈ ಬಗ್ಗೆ ಅವರ ಸಹೋದರ‌ ಕೂಡ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

 ಪದ್ಮನಾಭ ಸಾವಂತ್ ಅವರು ತನಗೆ ಕೊಲೆ ಬೆದರಿಕೆ ಇರುವ ಬಗ್ಗೆ ಕೆಲ ಸಮಯದ ಹಿಂದೆ ಪೊಲೀಸ್ ಮಹಾ ನಿರ್ದೇಶಕರಿಗೂ ದೂರು ನೀಡಿದ್ದಾರೆ. ಅದೇ ರೀತಿ ಬಂಟ್ವಾಳ, ಪುಂಜಾಲಕಟ್ಟೆ ಠಾಣೆಯಲ್ಲಿಯೂ ಬೆದರಿಕೆ ಇರುವ ಬಗ್ಗೆ ದೂರು ದಾಖಲಿಸಿದ್ದಾರೆ ಎಂದರು.
 ಸೇವಂತ್ ಅವರು ಸಮಾಜದಲ್ಲಾಗುತ್ತಿರುವ ಹಲವಾರು ಅಕ್ರಮ, ಭ್ರಷ್ಟಾಚಾರ, ಅನ್ಯಾಯಗಳ ಬಗ್ಗೆ ಆರ್ ಟಿ ಐ ಮೂಲಕ ಬಯಲಿಗೆಳೆದಿದ್ದರು.
ಇದರಿಂದಾಗಿ ಹಲವರ ದ್ವೇಷವನ್ನು ಕಟ್ಟಿಕೊಂಡಿದ್ದರು. ನಾಲ್ಕು ದಿನಗಳ ಹಿಂದೆ ವ್ಯಕ್ತಿಯೋರ್ವನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ 1.50 ಲಕ್ಷ ರೂ. ಪಡೆದ ಬಗ್ಗೆ  ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಮೊತ್ತವನ್ನು ಮರುಪಾವತಿಸುವ ಬಗ್ಗೆ ಪೊಲೀಸರ ಮುಂದೆ ವಾಗ್ದಾನಗೈದು ಹಣದೊಂದಿಗೆ ಠಾಣೆಗೂ ತೆರಳಿದ್ದರು.
ಬಳಿಕ‌ ಅಂದು ಮನೆಗೆ ಬಂದು ಬೈಕ್ ಮನೆಯಲ್ಲಿರಿಸಿ, ಸ್ಥಳೀಯ ದೇವಸ್ಥಾನದ ಜಾತ್ರೆಗೂ ಹೋಗಿದ್ದು, ಎರಡು ದಿನಗಳ ಬಳಿಕ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದರು.
 ಪದ್ಮನಾಭ ಸಾವಂತ್ ಆತ್ಮಹತ್ಯೆ ಮಾಡುವಂತ ಹೇಡಿಯಲ್ಲ, ಎಲ್ಲವನ್ನು‌ ಎದುರಿಸುವ ಸಾಮಥ್ಯ೯ ಹೊಂದಿದ್ದರು.  ಹಾಗಾಗಿ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆತ್ಮಹತ್ಯೆ ಎಂದಾದರೆ ಇದಕ್ಕೆ ಪ್ರಚೋದನೆ ನೀಡಿದವರನ್ನು ತನಿಖೆಗೊಳಪಡಿಸಬೇಕು‌ ಎಂದು ಆಗ್ರಹಿಸಿದರು.
 ಪಕ್ಷ ಈ ಪ್ರಕರಣವನ್ನು‌ಗಂಭೀರವಾಗಿ ಪರಿಗಣಿಸಿದ್ದು, ಇದರ ಹಿಂದಿನ ಸತ್ಯಾಸತ್ಯತೆ ಬಯಲಿಗೆ ಬರಬೇಕು. ಅಗತ್ಯಬಿದ್ದರೆ ಪಕ್ಷದ ವತಿಯಿಂದ ಜಿಲ್ಲಾ ಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದರು.
 ಪಕ್ಷದ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ ಜೈನ್, ಪಿಯೂಸ್ ರೋಡ್ರಿಗಸ್, ಸುರೇಶ್ ಜೋರ, ವೆಂಕಪ್ಪ ಪೂಜಾರಿ ಬಂಟ್ವಾಳ, ಡೆಂಜಿಲ್ ನೊರೋನ್ಹ, ಪ್ರವೀಣ್ ರೋಡ್ರಿಗಸ್ ಮೊದಲಾದವರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.