• Home  
  • ಬಂಟ್ವಾಳ : 500 ರೂ.ಕೊಡದಕ್ಕೆ ಚೂರಿ ಇರಿದು ಕೊಲೆಗೆ ಯತ್ನ(Bantwala Attempted murder by stabbing for non payment oF 500)
- ಅಪರಾಧ

ಬಂಟ್ವಾಳ : 500 ರೂ.ಕೊಡದಕ್ಕೆ ಚೂರಿ ಇರಿದು ಕೊಲೆಗೆ ಯತ್ನ(Bantwala Attempted murder by stabbing for non payment oF 500)

Share: 500 ರೂ.ಕೊಡದಕ್ಕೆ ಚೂರಿ ಇರಿದು ಕೊಲೆಗೆ ಯತ್ನ (Bantwala) ಬಂಟ್ವಾಳ : 500 ರೂ. ಕೊಡದ ಕಾರಣಕ್ಕೆ ಪರಿಚಿತನೆ  ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ  ಘಟನೆ ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ. ಚೂರಿ ಇರಿತದಿಂದ ಗಾಯಗೊಂಡವರನ್ನು ಬಂಟ್ವಾಳ ನಿವಾಸಿ ಪುಷ್ಪರಾಜ್ ಎಂದೂ, ಆರೋಪಿಯನ್ನು ರವಿ ನಾವೂರು ಎಂದು ಹೆಸರಿಸಲಾಗಿದೆ. ಇವರಿಬ್ಬರೂ ಪರಿಚಯಸ್ಥರು ಹಾಗೂ ಸ್ನೇಹಿತರಾಗಿದ್ದು, ಆರೋಪಿ ರವಿ ಗಾಯಾಳುವಿನಲ್ಲಿ 500 ಕೇಳಿದ್ದು,ಈ ಸಂದರ್ಭ ಪುಪ್ಪರಾಜ್ ಹಣ ಕೊಡಲು ನಿರಾಕರಿಸಿದ್ದರು.ಇದರಿಂದ ಕುಪಿತನಾದ  ಆರೋಪಿ ತನ್ನ ಕೈಯಲ್ಲಿದ್ದ […]

500 ರೂ.ಕೊಡದಕ್ಕೆ ಚೂರಿ ಇರಿದು ಕೊಲೆಗೆ ಯತ್ನ

(Bantwala) ಬಂಟ್ವಾಳ : 500 ರೂ. ಕೊಡದ ಕಾರಣಕ್ಕೆ ಪರಿಚಿತನೆ  ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ  ಘಟನೆ ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.
 ಚೂರಿ ಇರಿತದಿಂದ ಗಾಯಗೊಂಡವರನ್ನು ಬಂಟ್ವಾಳ ನಿವಾಸಿ ಪುಷ್ಪರಾಜ್ ಎಂದೂ, ಆರೋಪಿಯನ್ನು ರವಿ ನಾವೂರು ಎಂದು ಹೆಸರಿಸಲಾಗಿದೆ. ಇವರಿಬ್ಬರೂ ಪರಿಚಯಸ್ಥರು ಹಾಗೂ ಸ್ನೇಹಿತರಾಗಿದ್ದು, ಆರೋಪಿ ರವಿ ಗಾಯಾಳುವಿನಲ್ಲಿ 500 ಕೇಳಿದ್ದು,ಈ ಸಂದರ್ಭ ಪುಪ್ಪರಾಜ್ ಹಣ ಕೊಡಲು ನಿರಾಕರಿಸಿದ್ದರು.ಇದರಿಂದ ಕುಪಿತನಾದ  ಆರೋಪಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪುಪ್ಪರಾಜ್ ನ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ  ಗುರುರಾಜ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  ಗಾಯಾಳು ಪುಷ್ಪರಾಜ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಗಾಯಾಳು ಪುಪ್ಪರಾಜ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 ಘಟನೆಗೆ ಸಂಬಂಧಿಸಿ  ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಗಾಯಾಳು ಪುಪ್ಪರಾಜ್ ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿದ್ದು, ವೃತ್ತಿಯಲ್ಲಿ ಚಾಲಕರಾಗಿದ್ದಾರೆ.

ಖಂಡನೆ   
ಈ ಘಟನೆಯನ್ನು ಖಂಡಿಸಿರುವ
ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮತ್ತು ಬಂಟ್ವಾಳ ತಾಲೂಕು ಘಟಕ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಶಾಸಕರ ಭೇಟಿ:
ಚೂರಿ ಇರಿತಕ್ಕೊಳಗಾಗಿ ಮಂಗಳೂರು ಏ. ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಯುವಸೇನೆಯ ಮುಖಂಡ ಪುಷ್ಪರಾಜ್ ಜಕ್ರಿಬೆಟ್ಟು ಇವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರಲ್ಲದೆ, ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರಲ್ಲಿ ಮಾಹಿತಿಯನ್ನು ಪಡೆದರು. ಶಾಸಕರ ಭೇಟಿಯ ವೇಳೆ ಶಿವಪ್ರಸಾದ್ ಕೊಟ್ಟಾರಿ ಮತ್ತಿತರರು ಹಾಜರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.