• Home  
  • ಬಿ.ಸಿ.ರೋಡ್ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ (Youth commits scicide at BC Road Lodge)
- ಅಪರಾಧ

ಬಿ.ಸಿ.ರೋಡ್ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ (Youth commits scicide at BC Road Lodge)

Share: ಬಿ.ಸಿ.ರೋಡ್ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ (Bantwala) ಬಂಟ್ವಾಳ: ಬಿ.ಸಿ.ರೋಡಿನ ಲಾಡ್ಜ್ ವೊಂದರಲ್ಲಿ  ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.  ಮಂಗಳೂರಿನ ಅತ್ತಾವರ ನಿವಾಸಿ ಪ್ರಜ್ವಲ್ (30) ಆತ್ಮಹತ್ಯೆ  ಮಾಡಿಕೊಂಡ ಯುವಕನಾಗಿದ್ದಾನೆ. ಮೇ. 5 ರಂದು (ಭಾನುವಾರ) ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಬಳಿರುವ ಹೋಟೆಲ್ ಕೃಷ್ಣಿಮಾದಲ್ಲಿ ರೂಮ್ ಪಡೆದು ತಂಗಿದ್ದ, ಸೋಮವಾರ ರಾತ್ರಿ  ಊಟ ಮುಗಿಸಿ, ರೂಮ್ ನ ಬಾಗಿಲು ಹಾಕಿಕೊಂಡಿದ್ದ. ಮಂಗಳವಾರ  ಬೆಳಿಗ್ಗೆ ರೂಮ್ ನ ಬಾಗಿಲು […]

ಬಿ.ಸಿ.ರೋಡ್ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ

(Bantwala) ಬಂಟ್ವಾಳ: ಬಿ.ಸಿ.ರೋಡಿನ ಲಾಡ್ಜ್ ವೊಂದರಲ್ಲಿ  ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
  ಮಂಗಳೂರಿನ ಅತ್ತಾವರ ನಿವಾಸಿ ಪ್ರಜ್ವಲ್ (30) ಆತ್ಮಹತ್ಯೆ  ಮಾಡಿಕೊಂಡ ಯುವಕನಾಗಿದ್ದಾನೆ.
 ಮೇ. 5 ರಂದು (ಭಾನುವಾರ) ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಬಳಿರುವ ಹೋಟೆಲ್ ಕೃಷ್ಣಿಮಾದಲ್ಲಿ ರೂಮ್ ಪಡೆದು ತಂಗಿದ್ದ, ಸೋಮವಾರ ರಾತ್ರಿ  ಊಟ ಮುಗಿಸಿ, ರೂಮ್ ನ ಬಾಗಿಲು ಹಾಕಿಕೊಂಡಿದ್ದ. ಮಂಗಳವಾರ  ಬೆಳಿಗ್ಗೆ ರೂಮ್ ನ ಬಾಗಿಲು ತೆರೆಯದ ಕಾರಣ ಹೋಟೆಲ್ ಸಿಬ್ಬಂದಿಗಳು ಬಾಗಿಲು ಬಡಿದು ಕರೆದರೂ  ಯಾವುದೇ ಪ್ರತ್ಯುತ್ತರ ಬಾರದ  ಕಾರಣ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿಗಳಿ ಪೊಲೀಸರಿಗೆ  ಮಾಹಿತಿ ನೀಡಿದ್ದಾರೆ.
ಬಂಟ್ವಾಳ ನಗರ ಠಾಣೆಯ ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲು ತೆರೆದಾಗ ಪ್ರಜ್ವಲ್  ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ಈತ  ಆನ್ ಲೈನ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಸಂಸ್ಥೆಯ ಮಾಲೀಕರಿಂದ 60 ಸಾವಿರ ಸಾಲ ಪಡೆದು ಇದನ್ನು ವಾಪಸ್ ನೀಡಲು ಹಣ ಹೊಂದಿಸಲಾಗದೆ ಕೊರಗುತ್ತಿದ್ದ ಎಂದು ಹೇಳಲಾಗಿದೆ.

ಇದರ ಜೊತೆಗೆ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು,ಆಕೆಯೂ ಕೈಕೊಟ್ಟಿದ್ದಾಳೆನ್ನಲಾಗಿದೆ. ಸಾಲ ಮತ್ತು ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದು  ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು‌  ಪೊಲೀಸರು ಶಂಕಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಭೇಟಿ  ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Leave a comment

Your email address will not be published. Required fields are marked *

eMedia Kannada  @2025. All Rights Reserved.