• Home  
  •  ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ (Palimaru matt: Vidhya Manya Samsmarane)
- ಧಾರ್ಮಿಕ

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ (Palimaru matt: Vidhya Manya Samsmarane)

Share:  ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ ಪಡುಬಿದ್ರಿ, ಮೇ 21: ಶ್ರೀನಿವಾಸ ಕಲ್ಯಾಣೋತ್ಸವ, ವೇದವ್ಯಾಸ ಜಯಂತಿಗಳ ನಡುವಿನ ವೈಶಾಖ ಶುದ್ಧ ಏಕಾದಶೀ ದಿನದಂದೇ ಪರಂಧಾಮ ಗೈದಿರುವ  ಪಾರಿವ್ರಾಜಕರು ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು. ಅವರಿಗೆ ಶಾಸ್ತçಪಾಠ, ವಾಕ್ಯಾರ್ಥ ಚಿಂತನೆ, ತರ್ಕ, ಶ್ರವಣ, ಮನನಗಳು ಅತ್ಯಂತ ಪ್ರಿಯವಾಗಿತ್ತು. ಶ್ರೀ ವಿದ್ಯಾಮಾನ್ಯರ ಪ್ರವಚನಗಳು ಸಾರ್ವಕಾಲಿಕ ಮಾನ್ಯವಾದವುಗಳಾಗಿ ರೋಚಕ ವಿಚಾರಗಳಿಂದಲೂ ತುಂಬಿರುವುತ್ತಿದ್ದವು. ಹಾಗಾಗಿ ವಿದ್ವಾಂಸರೆಲ್ಲರಿAದಲೂ ಭರಪೂರ ಶಾಸ್ತಾçರ್ಥ ಚಿಂತನೆಯನ್ನು ತಮ್ಮ ಆರಾಧನೆ ದಿನ ನಡೆಸಿಕೊಳ್ಳುವುದಕ್ಕೋಸುಗವೇ ಅವರು ಆ ದಿನದಂದು […]

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ

ಪಡುಬಿದ್ರಿ, ಮೇ 21: ಶ್ರೀನಿವಾಸ ಕಲ್ಯಾಣೋತ್ಸವ, ವೇದವ್ಯಾಸ ಜಯಂತಿಗಳ ನಡುವಿನ ವೈಶಾಖ ಶುದ್ಧ ಏಕಾದಶೀ ದಿನದಂದೇ ಪರಂಧಾಮ ಗೈದಿರುವ  ಪಾರಿವ್ರಾಜಕರು ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು. ಅವರಿಗೆ ಶಾಸ್ತçಪಾಠ, ವಾಕ್ಯಾರ್ಥ ಚಿಂತನೆ, ತರ್ಕ, ಶ್ರವಣ, ಮನನಗಳು ಅತ್ಯಂತ ಪ್ರಿಯವಾಗಿತ್ತು. ಶ್ರೀ ವಿದ್ಯಾಮಾನ್ಯರ ಪ್ರವಚನಗಳು ಸಾರ್ವಕಾಲಿಕ ಮಾನ್ಯವಾದವುಗಳಾಗಿ ರೋಚಕ ವಿಚಾರಗಳಿಂದಲೂ ತುಂಬಿರುವುತ್ತಿದ್ದವು. ಹಾಗಾಗಿ ವಿದ್ವಾಂಸರೆಲ್ಲರಿAದಲೂ ಭರಪೂರ ಶಾಸ್ತಾçರ್ಥ ಚಿಂತನೆಯನ್ನು ತಮ್ಮ ಆರಾಧನೆ ದಿನ ನಡೆಸಿಕೊಳ್ಳುವುದಕ್ಕೋಸುಗವೇ ಅವರು ಆ ದಿನದಂದು ಹರಿಪಾದವನ್ನು ಸೇರಿರುವುದಾಗಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಅವರು ಕೀರ್ತಿಶೇಷ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆರಾಧನೆಯ ಶುಭ ಘಳಿಗೆಯ ಸಂದರ್ಭ   ಶ್ರೀ ಪಲಿಮಾರು ಮೂಲಮಠದಲ್ಲಿ ನಡೆಸಲಾದ ಹಿರಿಯ ವಿದ್ವಾಂಸರ ಶಾಸ್ತಾçರ್ಥ ಗೋಷ್ಟಿಯ ಸಮಾರೋಪ ಸಂದರ್ಭದಲ್ಲಿ ಶ್ರೀ ಗುರುಗಳ ಸಂಸ್ಮರಣೆಯನ್ನು ಗೈಯ್ಯುತ್ತಾ ಆಶೀರ್ವದಿಸುತ್ತಿದ್ದರು.

ಉಡುಪಿ ಶ್ರೀ ಅದಮಾರು ಮಠದ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ವಿದ್ಯಾಮಾನ್ಯರು ಸಾಧನಾ ಶೀಲರು. ಸದಾ ಸತ್ಯಕ್ಕಾಗಿ ಹುಡುಕಾಡುವಂತಹಾ ಸ್ವಭಾವ ಅವರದ್ದಾಗಿತ್ತು. ಅವರು ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುತ್ತಲೇ ಬಂದಿದ್ದು, ಅವರ ಪೂರ್ಣಾನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸಿದರು.

ಶ್ರೀ ಪಲಿಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿನ ವಾಕ್ಯಾರ್ಥ ನಿರ್ಣಯವನ್ನು ಉದ್ಧರಿಸಿ ಪ್ರವಚನ ಗೈದು ಶ್ರೀ ವಿದ್ಯಾಮಾನ್ಯರ ನಿರ್ಯಾಣದ ಸಂದರ್ಭದಲ್ಲಿ ತಾವು ಹಸುಗೂಸುವಾಗಿದ್ದು, ಅವರ ಪರಮ ಪ್ರಿಯ ಶಿಷ್ಯರಾದ ಶ್ರೀ ವಿದ್ಯಾಧೀಶರೇ ತಮಗೆ ಗುರುಗಳಾಗಿ ಅವರ ಮೂಲಕವೇ ತಮಗೆ ಶ್ರೀ ಪರಮಗುರುಗಳ ಆಶೀರ್ವಾದವು ಲಭಿಸುವಂತಾಗಲಿ ಎಂದು ಆಶಿಸಿದರು.

ವಿದ್ವಾಂಸರಾದ ಉಡುಪಿ ಪ್ರಕಾಶಾಚಾರ್, ಪ್ರಣವಾಚಾರ್ಯ, ಕೃಷ್ಣಾಚಾರ್ಯ ಹೊನ್ನಾಳಿ, ಸುದರ್ಶನಾಚಾರ್ ಸಾಮಗ, ಶಂಕರ ನಾರಾಯಣಾಚಾರ್ಯ, ನಾಗರಾಜಾಚಾರ್ಯ ಜಿ. ಎಚ್., ಶ್ರೀನಿವಾಸಾಚಾರ್ಯ, ಬಿ. ಎನ್. ವಿಜಯೀಂದ್ರಾಚಾರ್ಯ, ಎಚ್. ಸತ್ಯನಾರಾಯಣಾಚಾರ್ಯ, ರಾಜಗೋಪಾಲಾಚಾರ್ಯ, ಹರಿದಾಸ ಭಟ್ಟರು, ಕೊರ್ಲಹಳ್ಳಿ ನರಸಿಂಹಾಚಾರ್ಯ, ಸಗ್ರಿ ರಾಘವೇಂದ್ರ ಉಪಾಧ್ಯಾಯ, ನಾಗೇಂದ್ರಾಚಾರ್ಯ ಹೈದರಾಬಾದ್ ಇವರಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ವಿವಿಧ ಆಯಾಮಗಳ ಮೇಲಣ ಶಾಸ್ತಾçರ್ಥ ಮಂಡನೆಗಳು ನಡೆದವು.

ಮೋಹನ ಆಚಾರ್ಯ ಅವರು ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.