ಅದಾನಿ ಕಂಪನಿಯಿಂದ ಬೃಹತ್ ಕಲ್ಲಿದ್ದಲು ಹಗರಣ: ಫೈನಾನ್ಸಿಯಲ್ ಟೈಮ್ಸ್ ವರದಿ
ಕೃಪೆ: ಫೈನಾನ್ಸಿಯಲ್ ಟೈಮ್ಸ್

(New Dhelhi)ನವದೆಹಲಿ : ದೇಶದ ಅತ್ಯಂತ ಪ್ರಭಾವಿ ಸಂಸ್ಥೆಗಳಲ್ಲಿ ಒಂದಾದ ಅದಾನಿ ಸಂಸ್ಥೆಯಿಂದ ಬೃಹತ್ ಕಲ್ಲಿದ್ದಲು ಹಗರಣ ನಡೆದಿರುತ್ತದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.
ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆಯು ಲಂಡನ್, ಚಿಕಾಗೋ, ನ್ಯೂಯಾರ್ಕ್, ಪ್ಯಾರಿಸ್, ಸಿಂಗಾಪುರ ಸಹಿತ 24 ದೇಶಗಳಲ್ಲಿ ಪ್ರಕಾಶಿತವಾಗುತ್ತಿದೆ. ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆಯ ಡೇನೆ ಮೆಕ್ರೆಂ ಹಾಗೂ ಜಾನ್ ರೀಡ್ ಈ ಬಗ್ಗೆ ಸಮಗ್ರ ವರದಿ ಮಾಡಿದ್ದಾರೆ.
ಅದಾನಿ ಕಂಪನಿಯು ಕಳಪೆ ಮಟ್ಟದ ಕಲ್ಲಿದ್ದಲನ್ನು ಖರೀದಿಸಿ ಮೂರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಲಾಭ ಗಳಿಸಿದೆ ಎಂದು ಆರೋಪಿಸಿದ ಪತ್ರಿಕೆ, ಪ್ರಥಮ ದರ್ಜೆ ಕಲ್ಲಿದ್ದಲು ಎಂದು ಕಳಪೆ ಮಟ್ಟದ ಕಲ್ಲಿದ್ದಲನ್ನು ಭಾರತಕ್ಕೆ ಮಾರಾಟ ಮಾಡಿದೆ.
ಕಳಪೆ ಮಟ್ಟದ ಕಲ್ಲಿದ್ದಲಿನಿಂದ ಪರಿಸರದಲ್ಲಿ ಪರ್ಯಾವರಣ ಸಮಸ್ಯೆ ಹೆಚ್ಚಾಗಿ ಜನರ ಆರೋಗ್ಯ ಕೆಡುತ್ತಿದೆ. ಅಂತೆಯೇ ಉತ್ತಮ ದರ್ಜೆಯ ಕಲ್ಲಿದ್ದಲ್ಲಿನಿಂದ ಪರಿಸರಕ್ಕೆ ಅಷ್ಟು ಹಾನಿ ಇರುವುದಿಲ್ಲ. ಆದರೆ ಕಳಪೆ ಮಟ್ಟದ ಕಲ್ಲಿದ್ದಲನ್ನು ಉತ್ತಮ ಕಲ್ಲಿದ್ದಲು ಎಂದು ಮಾರಾಟ ಮಾಡಿ ಜನರ ಹಣವನ್ನು ಲೂಟಿ ಮಾಡಿದೆ. ಇದರಿಂದ ಜನರಿಗೆ ಆರೋಗ್ಯದ ಸಮಸ್ಯೆಯ ಜೊತೆಗೆ ಅವರ ಕಿಸೆಯಲ್ಲಿದ್ದ ಹಣಕ್ಕೂ ಕನ್ನ ಹಾಕಲಾಗುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.
ಫೈನಾನ್ಸಿಯಲ್ ಟೈಮ್ಸ್ 2023ರಲ್ಲಿ ಈ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಆದರೆ ಕೇಂದ್ರ ಸರಕಾರ ಕೇವಲ ತನಿಖೆ ಎಂಬ ನಾಟಕವಾಡಿ ಕೈ ತೊಳೆದುಕೊಂಡಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷವು ತೀವ್ರವಾಗಿ ಬಿಜೆಪಿಯಲ್ಲಿ ತರಾಟೆಗೆ ತೆಗೆದುಕೊಂಡು, ಕೇಂದ್ರ ಸರಕಾರವು ಅದಾನಿಯವರೊಂದಿಗೆ ಸೇರಿ ಭಾರತದ ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಹೇಳಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಟ್ವಿಟರ್ನಲ್ಲಿ, ಇದು ಬೃಹತ್ ಕಲ್ಲಿದ್ದಲು ಹಗರಣವಾಗಿದೆ. ಪ್ರಧಾನಿ ಮೋದಿ ಅವರ ಪರಮ ಮಿತ್ರ ಅದಾನಿಯವರು ಕಡಿಮೆ ಗುಣಮಟ್ಟದ ಕಲ್ಲಿದ್ದಲು ಖರೀದಿಸಿ ಮೂರು ಪಟ್ಟು ಹೆಚ್ಚಿನ ದರ ವಸೂಲಿ ಮಾಡಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟ ಆಡಳಿತಕ್ಕೆ ಬರಲಿದ್ದು ಅದಾನಿ ಕಂಪನಿ ಜನರಿಂದ ಲೂಟಿ ಹೊಡೆದ ಪೈಸೆ, ಪೈಸೆಯ ಲೆಕ್ಕ ಚುಕ್ತಾ ಮಾಡಲಿದೆ ಎಂದಿದ್ದಾರೆ.

