• Home  
  • ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು (Byke,Tempo accident at hejamady near toll plaza)
- ಅಪಘಾತ

ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು (Byke,Tempo accident at hejamady near toll plaza)

Share: ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು (Hejamady) ಹೆಜಮಾಡಿ: ಬೈಕೊಂದಕ್ಕೆ ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆದಿದೆ. ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಚಾಲಕ ಏಕಾಏಕಿ ವಾಹನವನ್ನು ಹೆದ್ದಾರಿಗಡ್ಡವಾಗಿ ಚಲಾಯಿದ ಪರಿಣಾಮ ಬೈಕ್ ಸವಾರನ ಗಮನಕ್ಕೆ ಬಾರದೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.  ವಾಹನ ಚಾಲಕ ಅಜಾಗರೂಕತೆಯ ಚಾಲನೆಯಿಂದ   ಹೆಜಮಾಡಿ ನಾರಾಯಣ ಗುರು […]

ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು

(Hejamady) ಹೆಜಮಾಡಿ: ಬೈಕೊಂದಕ್ಕೆ ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆದಿದೆ.

ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಚಾಲಕ ಏಕಾಏಕಿ ವಾಹನವನ್ನು ಹೆದ್ದಾರಿಗಡ್ಡವಾಗಿ ಚಲಾಯಿದ ಪರಿಣಾಮ ಬೈಕ್ ಸವಾರನ ಗಮನಕ್ಕೆ ಬಾರದೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.

 ವಾಹನ ಚಾಲಕ ಅಜಾಗರೂಕತೆಯ ಚಾಲನೆಯಿಂದ   ಹೆಜಮಾಡಿ ನಾರಾಯಣ ಗುರು ರಸ್ತೆಗೆ ತಿರುಗಿಸಿದ್ದು, ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಬೈಕ್‌ ಸಂಪೂರ್ಣ ಜಖಂಗೊಂಡಿದೆ. ರಸ್ತೆಗೆ ಎಸೆಯಲ್ಪಟ್ಟಿದ್ದ ಬೈಕ್‌ ಸವಾರ ಆ ಸಂದರ್ಭ ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತಕ್ಷಣ ಸ್ಥಳೀಯರು ಬೈಕ್‌ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಚೇತರಿಸಿಕೊಂಡಿದ್ದಾರೆ.

 ಹೊಸ ಬೈಕನ್ನು ಮಂಗಳೂರಿನಿಂದ ಉಡುಪಿಗೆ ಸಾಗಿಸುತ್ತಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.  

ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.