• Home  
  • ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜೂ. 17ರಂದು ಮೆಗಾ ಆರ್ಥಿಕ ನೆರವು ವಿತರಣೆ (Global Bunts Association’s Distribute of megha Financial aid On 17th June)
- social service

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜೂ. 17ರಂದು ಮೆಗಾ ಆರ್ಥಿಕ ನೆರವು ವಿತರಣೆ (Global Bunts Association’s Distribute of megha Financial aid On 17th June)

Share: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜೂ. 17ರಂದು ಮೆಗಾ ಆರ್ಥಿಕ ನೆರವು ವಿತರಣೆ ನೂತನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ। ಬ್ರಿಜೇಶ್ ಚೌಟರಿಗೆ ಸಮ್ಮಾನ (Mangaluru) ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಹಾ ನಿರ್ದೇಶಕ ಹಾಗೂ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕೆ. ಮುಂಬಯಿ ಸಿಎಂಡಿ ಕೆ.ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಮಾಜ ಕಲ್ಯಾಣ ಮೆಗಾ ಆರ್ಥಿಕ ನೆರವು ವಿತರಣೆ ಹಾಗೂ ದಕ್ಷಿಣ ಕನ್ನಡ ನೂತನ ಸಂಸದ ಕ್ಯಾ। ಬ್ರಿಜೇಶ್ ಚೌಟ […]

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜೂ. 17ರಂದು ಮೆಗಾ ಆರ್ಥಿಕ ನೆರವು ವಿತರಣೆ

ನೂತನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ। ಬ್ರಿಜೇಶ್ ಚೌಟರಿಗೆ ಸಮ್ಮಾನ

(Mangaluru) ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಹಾ ನಿರ್ದೇಶಕ ಹಾಗೂ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕೆ. ಮುಂಬಯಿ ಸಿಎಂಡಿ ಕೆ.ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಮಾಜ ಕಲ್ಯಾಣ ಮೆಗಾ ಆರ್ಥಿಕ ನೆರವು ವಿತರಣೆ ಹಾಗೂ ದಕ್ಷಿಣ ಕನ್ನಡ ನೂತನ ಸಂಸದ ಕ್ಯಾ। ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀ ನಿವಾಸ ಪೂಜಾರಿ, ಅವರಿಗೆ ಜೂ. 17ರಂದು ಸಮ್ಮಾನ ಸಮಾರಂಭವು ಬೆಳಗ್ಗೆ 10ರಿಂದ ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವಿ.ಕೆ ಗ್ರೂಫ್ ಆಫ್ ಕಂಪೆನೀಸ್ ನ ಸಿಎಂಡಿ ಕೆ ಎಂ ಶೆಟ್ಟಿ ಉದ್ಘಾಟಿಸಲಿದ್ದಾರೆ.

 ಮುಖ್ಯ ಅತಿಥಿಯಾಗಿ ಒಕ್ಕೂಟದ ಮಹಾದಾನಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿ. ನ ಮ್ಯಾನೆಜಿಂಗ್ ಡೈರೆಕ್ಟರ್ ಕನ್ಯಾನ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರಕುಮಾರ್ ಭಾಗವಹಿಸಲಿದ್ದಾರೆ. 

 ಒಕ್ಕೂಟದ ವಿಶೇಷ ಮಹಾನಿರ್ದೇಶಕರು ಮತ್ತು ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ತೋನ್ಸೆ ಆನಂದ್ ಎಂ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಹಾ ನಿರ್ದೇಶಕರಾದ ಎಂಆರ್‌ಜಿ ಗ್ರೂಪ್ಸ್ ನ ಚೆಯರ್ ಮೆನ್ ಕೆ. ಪ್ರಕಾಶ್‌ ಶೆಟ್ಟಿ,, ಶಶಿ ಕೇಟರಿಂಗ್ ಸರ್ವಿಸಸ್ ಬರೋಡ ಇದರ ಎಂ ಡಿ ಶಶಿಧರ ಶೆಟ್ಟಿ ಬರೋಡ, ರಾಕ್ಷಿ ಬಿಲ್ಡರ್ಸ್‌ನ ರಾಜೇಶ್ ಎನ್. ಶೆಟ್ಟಿ ಅಲಿಯನ್ಸ್ ಇಂಫ್ರಾಸ್ಟ್ರಕ್ಟರ್ ರಿಯಲ್ಟರ್ಸ್ಸ್ ಅರವಿಂದ್ ಆನಂದ್ ಶೆಟ್ಟಿ, ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ವಕ್ವಾಡಿ ಪ್ರವೀಣ್ ಕುಮಾ‌ರ್ ಶೆಟ್ಟಿ, ಮೆರಿಟ್ ಹಾಸ್ಪಿಟಾಲಿಟಿಯ ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಪಂಜುರ್ಲಿ ಗ್ರೂಪ್‌ ಆಫ್ ಹೊಟೇಲ್ಸ್‌ನ ರಾಜೇಂದ್ರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ಳೂರು ಮೋಹನದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ್‌ ಡಿ. ಶೆಟ್ಟಿ ರಂಗೋಲಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

 ಸಮಾರಂಭದಲ್ಲಿ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ” ಸನಾತನ ರಾಷ್ಟ್ರಂಜಲಿ” ಕಾರ್ಯಕ್ರಮ‌ ನಡೆಯಲಿದೆ. 

 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇ ಶಕರು, ಮಹಾಪೋಷಕರು, ಪೋಷಕರು, ದಾನಿಗಳು, ಬಂಟರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಕಟನೆ ತಿಳಿಸಿದೆ.


 

Leave a comment

Your email address will not be published. Required fields are marked *

eMedia Kannada  @2025. All Rights Reserved.