• Home  
  • ಕೊಲ್ನಾಡು : ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ (Kolnadu: School bag distribution to local school by Auto Rikshaw drivers & owners Association)
- social service

ಕೊಲ್ನಾಡು : ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ (Kolnadu: School bag distribution to local school by Auto Rikshaw drivers & owners Association)

Share: ಕೊಲ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ ರಿಕ್ಷಾ ಚಾಲಕರು ಆರ್ಥಿಕ ಹಿನ್ನಡೆಯಲ್ಲಿದ್ದರೂ, ಇತರರ ನೋವಿಗೆ ಸ್ಪಂಧಿಸುವವರಾಗಿದ್ದಾರೆ : ಜೆ ಕೃಷ್ಣ ಬಿ.ಕೋಟ್ಯಾನ್  ಮೂಲ್ಕಿ,ಜೂ.18 : ಕೊಲ್ನಾಡು  ರಿಕ್ಷಾ ಚಾಲಕರು ಮತ್ತು ಮಾಲಕರು ಸಮಾಜದಲ್ಲಿ ಆರ್ಥಿಕ ಹಿನ್ನಡೆಯ ಜನರಾಗಿದ್ದರೂ, ತಮ್ಮ ಹೊಟ್ಟೆ ಪಾಡಿಗೆ ದುಡಿಯುವ ಜೊತೆಗೆ ಇತರರ ನೋವಿಗೆ ಸ್ಪಂಧಿಸುವ ಉತ್ತಮ ಕೆಲಸಗಳ ಕಾಳಜಿಯಿಂದ  ಜನರ ವಿಶ್ವಾಸವನ್ನು ಗಳಿಸಿ  ಊರಿನ ರಾಯಭಾರಿಗಳಂತೆ ಸಮಾಜದಲ್ಲಿ ಗುರುತಿಸಿದ್ದಾರೆ ಎಂದು […]

ಕೊಲ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ

ರಿಕ್ಷಾ ಚಾಲಕರು ಆರ್ಥಿಕ ಹಿನ್ನಡೆಯಲ್ಲಿದ್ದರೂ, ಇತರರ ನೋವಿಗೆ ಸ್ಪಂಧಿಸುವವರಾಗಿದ್ದಾರೆ : ಜೆ ಕೃಷ್ಣ ಬಿ.ಕೋಟ್ಯಾನ್

 ಮೂಲ್ಕಿ,ಜೂ.18 : ಕೊಲ್ನಾಡು  ರಿಕ್ಷಾ ಚಾಲಕರು ಮತ್ತು ಮಾಲಕರು ಸಮಾಜದಲ್ಲಿ ಆರ್ಥಿಕ ಹಿನ್ನಡೆಯ ಜನರಾಗಿದ್ದರೂ, ತಮ್ಮ ಹೊಟ್ಟೆ ಪಾಡಿಗೆ ದುಡಿಯುವ ಜೊತೆಗೆ ಇತರರ ನೋವಿಗೆ ಸ್ಪಂಧಿಸುವ ಉತ್ತಮ ಕೆಲಸಗಳ ಕಾಳಜಿಯಿಂದ  ಜನರ ವಿಶ್ವಾಸವನ್ನು ಗಳಿಸಿ  ಊರಿನ ರಾಯಭಾರಿಗಳಂತೆ ಸಮಾಜದಲ್ಲಿ ಗುರುತಿಸಿದ್ದಾರೆ ಎಂದು ಉಧ್ಯಮಿ ಹಳೆಯಂಗಡಿ ಪೂಜಾ ಸಂಸ್ಥೆಯ ಮುಖ್ಯಸ್ಥ ಜೆ ಕೃಷ್ಣ ಬಿ.ಕೋಟ್ಯಾನ್ ಹೇಳಿದ್ದಾರೆ.

ಅವರು ಕೊಲ್ನಾಡು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಕೆ.ಎಸ್. ರಾವ್ ನಗರದ ಸರಕಾರಿ ಪಿ.ಎಂ.ಎಸ್.ಆರ್.ಐ. ಮಾದರಿ ಪ್ರಾಥಮಿಕ ಶಾಲೆಯ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್‌ ಬ್ಯಾಗ್‌ಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಲಕ ಮಾಲಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ವಹಿಸಿದ್ದರು.

ಮೂಲ್ಕಿಯ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೊಲ್ನಾಡು ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಸಮಾಜ ಸೇವೆಯ ಉತ್ತಮ  ಕಾರ್ಯಕ್ರಮಗಳ ಮೂಲಕ ಮಾದರಿಯಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರು ಎಚ್.ಪಿ.ಸಿ.ಎಲ್ ನ ರವಿ ಎಸ್. ಶೆಟ್ಟಿ ಕಾರ್ಯಕ್ರಮದಲ್ಲಿ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು.

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ದಿನೇಶ್ ಅವರು ಕೊಡುಗೆಯನ್ನು ಶ್ಲಾಘಿಸಿದರು.

 ಫ್ರೌಢ ಶಾಲೆಯ ಹಿರಿಯ ಶಿಕ್ಷಕಿ ಕಾಮೇಶ್ವರಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಜೀವನ್ ಶೆಟ್ಟಿ ,ಉಪಾಧ್ಯಕ್ಷ ಪುಷ್ಪರಾಜ್, ಪದಾಧಿಕಾರಿಗಳಾದ  ಪ್ರವೀಣ್ ರೆಡ್ಡಿ, ಸುನೀಲ್, ಗುರುಪ್ರಸಾದ್, ಎಲ್ಲಪ್ಪ, ಜಯರಾಜ್ ದೇವಾಡಿಗ, ಹೇಮನಾಥ್, ಮಲ್ಲಯ್ಯ  ಹಾಗು ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಲಕ್ಷ್ಮೀ ದೇವಿ ಪ್ರಸ್ತಾವಿಸಿ, ಸ್ವಾಗತಿಸಿದರು. ದಿನೇಶ್ ಕೊಲ್ನಾಡು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.