• Home  
  • ಶಾಲೆಗಳಲ್ಲಿ ದೇಶ, ಸತ್ಯ, ಮೌಲ್ಯಗಳ ಭೋಧನೆ ಆಗಬೇಕು: ಲೆ। ಕರ್ನಲ್ ವಿವೇಕ್ ಬಿಂದ್ರ
- ಮಂಗಳೂರು - ಶಾಲಾ ಕಾಲೇಜು

ಶಾಲೆಗಳಲ್ಲಿ ದೇಶ, ಸತ್ಯ, ಮೌಲ್ಯಗಳ ಭೋಧನೆ ಆಗಬೇಕು: ಲೆ। ಕರ್ನಲ್ ವಿವೇಕ್ ಬಿಂದ್ರ

Share: ಅಮೃತ ವಿದ್ಯಾಲಯಂ ನಲ್ಲಿ ಶಾಲಾ ಮಂತ್ರಿ ಮಂಡಲ ಪದಗ್ರಹಣ ಮಂಗಳೂರು: ಶಾಲೆಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಧನ್ಯತೆ ಕೊಟ್ಟು ವಿದ್ಯಾರ್ಥಿಗಳಿಗೆ ದೇಶ, ಧೈರ್ಯ, ಸತ್ಯ, ಮೌಲ್ಯಗಳನ್ನು ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರ ಹೇಳಿದರು. ಮಂಗಳವಾರ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನೂತಾವಾಗಿ ರಚನೆಗೊಂಡ ವಿದ್ಯಾರ್ಥಿ ಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗಳು ಕೇವಲ ಶಿಕ್ಷಣವನ್ನು ನೀಡುವಂತಹ ಸಂಸ್ಥೆಯಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವಂತಹದ್ದು […]

ಅಮೃತ ವಿದ್ಯಾಲಯಂ ನಲ್ಲಿ ಶಾಲಾ ಮಂತ್ರಿ ಮಂಡಲ ಪದಗ್ರಹಣ

ಮಂಗಳೂರು: ಶಾಲೆಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಧನ್ಯತೆ ಕೊಟ್ಟು ವಿದ್ಯಾರ್ಥಿಗಳಿಗೆ ದೇಶ, ಧೈರ್ಯ, ಸತ್ಯ, ಮೌಲ್ಯಗಳನ್ನು ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರ ಹೇಳಿದರು.

ಮಂಗಳವಾರ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನೂತಾವಾಗಿ ರಚನೆಗೊಂಡ ವಿದ್ಯಾರ್ಥಿ ಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗಳು ಕೇವಲ ಶಿಕ್ಷಣವನ್ನು ನೀಡುವಂತಹ ಸಂಸ್ಥೆಯಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವಂತಹದ್ದು ಆಗಿರಬೇಕೆಂದು ಎಂದು ಅವರು ಹೇಳಿದರು.

ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಆಯ್ಕೆಯಾದಂತಹ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ, ಶಾಲಾ ಕೀರ್ತಿ ಪತಾಕೆಯನ್ನು ಗಗನ್ನೆತ್ತರಕ್ಕೆ ಹಾರಿಸುವುದಾಗಿ ಪ್ರತಿಜ್ಞೆ ಮಾಡಿದರು. ಕವನ, ರಸಪ್ರಶ್ನೆ ಗಳ ಮೂಲಕ ವಿವಿಧ ಸಂಘಗಳಾದ ಉನ್ನತಿ, ಪ್ರಕೃತಿ, ಗಣಿತ್ ಸಂಘಗಳು ತಮ್ಮ ತಮ್ಮ ಸಂಘಗಳ ಧ್ಯೇಯ ಉದ್ದೇಶಗಳನ್ನು ಪ್ರಸ್ತುತಪಡಿಸಿದರು.

ಶಾಲಾ ವಿದ್ಯಾರ್ಥಿನಿ ಪ್ರಜ್ಞ ಕಾರ್ಯಕ್ರಮ ನಿರೂಪಿಸಿದರು. ಅಮೃತ ಕ್ಯಾಂಪಸ್ಸಿನ ನಿರ್ದೇಶಕ ಯತೀಶ್ ಬೈಕಂಪಾಡಿ, ಪ್ರಾಂಶುಪಾಲೆ ಅಕ್ಷತಾ ಆರ್ ಶೆಣೈ ಶಾಲಾ ನಾಯಕ ಜಿಶಿತ್, ನಾಯಕಿ ಅಮೃತ ಪ್ರಿಯ, ಶಾಲಾ ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.