ಪಡುಬಿದ್ರಿ: ಸರಕಾರಿ ಬಸ್ಸು ಡಿಕ್ಕಿ, ಮಟನ್ ಸ್ಟಾಲ್ ಕಾರ್ಮಿಕ ಸಾವು
(Padubidri) ಪಡುಬಿದ್ರಿ: ಪಡುಬಿದ್ರಿಯ ಭವಾನಿ ಮಟನ್ ಸ್ಟಾಲ್ ನಲ್ಲಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಿದ್ದ ವ್ಯಕ್ತಿಯೋರ್ವರು ಶುಕ್ರವಾರ ರಾತ್ರಿ ಮುಖ್ಯ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದಾಗ ಸರಕಾರಿ ಬಸ್ಸೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಮೃತ ವ್ಯಕ್ತಿ ಹುಬ್ಬಳ್ಳಿ ಮೂಲದ ಸಂಗಪ್ಪ(60) ಎಂದು ಗುರುತಿಸಲಾಗಿದೆ.
ಸಂಗಪ್ಪನವರ ಸಂಬಂಧಿಕರು ಹೆದ್ದಾರಿಯ ಪೂರ್ವ ದಿಕ್ಕಿನ ಪದ್ರ ಎಂಬ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಟನ್ ಅಂಗಡಿಯ ಕೆಲಸ ಮುಗಿಸಿದ ಬಳಿಕ ಇವರು ಸಂಬಂಧಿಗಳ ಮನೆಗೆ ಹೋಗಿ ಮರಳಿ ರಸ್ತೆ ದಾಟುತ್ತಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದ ಸರಕಾರಿ ಬಸ್ಸು ಡಿಕ್ಕಿ ಹೊಡೆದಿದೆ. ಸಂಗಪ್ಪ ತಲೆಗೆ ಹೆಚ್ಚಿನ ಹೊಡೆದ ಬಿದ್ದ ಪರಿಣಾಮ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

