ಸಾಸ್ತಾನ: ಗೋಳಿ ಗರಡಿ ದೈವಸ್ಥಾನದಲ್ಲಿ ಸಂಸದರಿಗೆ ಗೌರವ
(Sasthana) ಸಾಸ್ತಾನ: ಇಲ್ಲಿನ ಸಾಸ್ತಾನ ಗೋಳಿಗರಡಿ ಶ್ರೀ ಬ್ರಹ್ಮಬೈದರ್ಕಳ, ಪಂಜುರ್ಲಿ ಪರಿವಾರ ದೈವಸ್ಥಾನದಲ್ಲಿ ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಆಗಮಿಸಿ ವಿಶೇಷ ಪೂಜೆ, ಗೌರವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಮುಖ್ಯಸ್ಥ ಜಿ. ವಿಠ್ಠಲ ಪೂಜಾರಿ ಸನ್ಮಾನಿಸಿ ಪ್ರಸಾದ ವಿತರಿಸಿದರು.
ಪಾಂಡೇಶ್ವರ ಗ್ರಾ. ಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಮಹಿಳಾ ಘಟಕದ ಕಾರ್ಯದರ್ಶಿ ಲೀಲಾವತಿ ಗಂಗಾಧರ, ಸಾಸ್ತಾನ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಗೋವಿಂದ ಪೂಜಾರಿ, ಬ್ಯಾಂಕ್‌ನ ಸಿಇಓ ವಿಜಯ್ ಪೂಜಾರಿ, ದೈವಸ್ಥಾನದ ಪಾತ್ರಿ ಶಂಕರ ಪೂಜಾರಿ, ಬಿಜೆಪಿ ಮುಖಂಡ ಐರೋಡಿ ವಿಠ್ಠಲ ಪೂಜಾರಿ, ಉದ್ಯಮಿ ಪಂಜು ಪೂಜಾರಿ ಬೆಂಗಳೂರು, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು.

