ರೋಟರಿ ಕ್ಲಬ್‌ನ ಹಂಗಾರಕಟ್ಟೆ- ಸಾಸ್ತಾನ ಅಧ್ಯಕ್ಷರಾಗಿ ಲೀಲಾವತಿ ಗಂಗಾಧರ್ ಆಯ್ಕೆ
(Kota) ಕೋಟ: 2024-25ನೇ ಸಾಲಿನ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ನೂತನ ಅಧ್ಯಕ್ಷರಾಗಿ ಪಾಂಡೇಶ್ವರ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ, ಹಾಗೂ ಸಾಸ್ತಾನ ಸಿ.ಎ ಬ್ಯಾಂಕ್ ನಿರ್ದೇಶಕಿ, ವಿವಿಧ ಸಂಘ ಸಂಸ್ಥೆ ಸೇರಿದಂತೆ ರಾಜಕಾರಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೀಲಾವತಿ ಗಂಗಾಧರ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಸುಲತಾ ಎಸ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ.
ಇದೇ ಬರುವ ಜುಲೈ 1ರಂದು ಸಾಸ್ತಾನದ ಸಂಭ್ರಮ ಸಭಾಂಗಣದಲ್ಲಿ ಪದಪ್ರದಾನ ಸಮಾರಂಭ ನಡೆಯಲಿದೆ.

