ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದದ ವತಿಯಿಂದ ವನಮಹೋತ್ಸವ
(Hejamady) ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದ ಹೆಜಮಾಡಿ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ವನಮಹೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷರಾದ ಅಶೋಕ್ ವಿ.ಕೆ ಹಾಗೂ ಯುವತಿ ವೃಂದದ ಅಧ್ಯಕ್ಷೆ ಶ್ರೀಮತಿ ಪವಿತ್ರಾ ಗಿರೀಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ನಿವೃತ್ತ ಕರ್ನಾಟಕ ವಿದ್ಯುತ್ ನಿಗಮದ ಅಧೀಕ್ಷಕ ಅಭಿಯಂತರರಾದ ಕುಮಾರಸ್ವಾಮಿ ಶೆಣೈ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ಹೆಜ್ಮಾಡಿ, ಹೆಜಮಾಡಿ ಏಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ಎಸ್ ದಿವಾಕರ ಹೆಜ್ಮಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಬಬಿತಾ ಪುರುಷೋತ್ತಮ್, ಉದ್ಯಮಿ ಹಾಗೂ ದಾನಿಗಳಾದ ಹೇಮಾನಂದ ಕೆ ಪುತ್ರನ್, ಭಾರತೀಯ ನೌಕಾ ಪಡೆಯ ಅಧಿಕಾರಿ ಲಿಖಿತ್ ಕೆ ಸುವರ್ಣ, ಯುವಕ ವೃಂದದ ಉಪಾಧ್ಯಕ್ಷ ಚಂದ್ರಶೇಖರ ಅಮೀನ್, ಯುವತಿ ವೃಂದದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೂಪಾ ಹೇಮಾನಂದ ಪುತ್ರನ್ ಹಾಗೂ ಯುವಕ-ಯುವತಿ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ರವರು ಸ್ವಾಗತಿಸಿ ವಂದಿಸಿದರು.

