ಎರ್ಮಾಳು: ನಿದ್ದೆಯ ಮಂಪರು̧ ಮೋರಿದಂಡೆಗೆ ಡಿಕ್ಕಿಯಾದ ಕಾರು ಪಲ್ಟಿ: ಅದೃಷ್ಟವಶಾತ್ ಚಾಲಕ ಪಾರು
(Yermalu) ಎರ್ಮಾಳು: ಬಡಾ ಎರ್ಮಾಳು ಅಪೂರ್ವ ಲಾಡ್ಜ್ ಮುಂಭಾಗ ಕಾರೊಂದು ಚಾಲಕನ ನಿದ್ದೆಯ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಮೋರಿಯೊಂದರ ದಂಡೆಗೆ ಡಿಕ್ಕಿಯಾಗಿ ಮುಗುಚಿ ಬಿದ್ದ ಘಟನೆ ಗುರುವಾರ ಬೆಳಿಗ್ಗೆ ಘಟಿಸಿದೆ.
ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಬಿಟ್ಟು ಮರಳಿ ಉಡುಪಿಗೆ ಹಿಂದಿರುಗಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಹೆಜಮಾಡಿ ಟೋಲ್ ಸಿಬ್ಬಂದಿಗಳು ಸಹಿತ ಪೊಲೀಸರು ಹೆದ್ದಾರಿಗಡ್ಡವಾಗಿ ಉರುಳಿಬಿದ್ದ ಕಾರನ್ನು ಯಂತ್ರದ ಮೂಲಕ ತೆರವುಗಳಿಸಿ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ.

