• Home  
  • ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Mooluru car accident, A youth business man dead)
- ಅಪಘಾತ

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Mooluru car accident, A youth business man dead)

Share: ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Kaup) ಕಾಪು: ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಕಾಪು ಬಳಿಯ ಕೊಪ್ಪಲಂಗಡಿ ರಾಹೆ ೬೬ರಲ್ಲಿ ಶನಿವಾರ ಸಂಜೆ ನಡೆದಿದೆ. ಪ್ರಸ್ತುತ ಮಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ತಮಿಳುನಾಡು ಮೂಲದ ಮಣಿಕಂಠ ಪ್ರಭು (೨೮) ಮೃತ ಪಟ್ಟವರು ಎಂದು ತಿಳಿದು ಬಂದಿದೆ. ಅಫಘಾತಕ್ಕೆ ಕಾರಣವಾದ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮೊಹಮ್ಮದ್ ಸಹಾದ್ ಎಂಬಾತನೂ ಗಾಯಗೊಂಡಿದ್ದು, ಆತನನ್ನು ಉಡುಪಿ […]

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು

(Kaup) ಕಾಪು: ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಕಾಪು ಬಳಿಯ ಕೊಪ್ಪಲಂಗಡಿ ರಾಹೆ ೬೬ರಲ್ಲಿ ಶನಿವಾರ ಸಂಜೆ ನಡೆದಿದೆ.

ಪ್ರಸ್ತುತ ಮಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ತಮಿಳುನಾಡು ಮೂಲದ ಮಣಿಕಂಠ ಪ್ರಭು (೨೮) ಮೃತ ಪಟ್ಟವರು ಎಂದು ತಿಳಿದು ಬಂದಿದೆ.

ಅಫಘಾತಕ್ಕೆ ಕಾರಣವಾದ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮೊಹಮ್ಮದ್ ಸಹಾದ್ ಎಂಬಾತನೂ ಗಾಯಗೊಂಡಿದ್ದು, ಆತನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರನ್ನು ಚಾಲಕ ಸಹಾದ್‌ ಅಜಾಗರೂಕತೆಯಿಂದ ಚಲಾಯಿಸಿದ್ದು,    ಮಂಗಳೂರಿನಿಂದ ಬಟ್ಟೆ ವ್ಯಾಪಾರದ ಆರ್ಡರ್ ತೆಗೆದುಕೊಳ್ಳುವುದಕ್ಕಾಗಿ ಉಡುಪಿಗೆ ತೆರಳುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರು ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಬೈಕ್ ಸಮೇತವಾಗಿ ಐವತ್ತು ಮೀಟರ್ ದೂರದವರೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೈಕ್‌ಗೆ ಢಿಕ್ಕಿ ಹೊಡೆದ ಕಾರು, ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೆ ಢಿಕ್ಕಿಯಾಗಿದ್ದು, ಮತ್ತೊಂದು ಕಾರಿಗೆ ತಾಗಿ ಬಂದು ರಸ್ತೆ ಬದಿಯ ಗ್ಯಾರೇಜ್‌ನಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಲಾರಿಗೆ ತಾಗಿ ಮಗುಚಿ ಬಿದ್ದಿದೆ.

ತೀವ್ರ ಗಾಯಗೊಂಡು ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಶ್ರಮವಹಿಸಿ ಹೊರಕ್ಕೆ ತೆಗೆದು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

  ಅಪಘಾತ ಸ್ಥಳದಲ್ಲಿ ಜೀನಸು ಅಂಗಡಿ, ಗ್ಯಾರೇಜ್ ಸಹಿತ ಹಲವು ಅಂಗಡಿಗಳಿದ್ದು, ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಅಲ್ಲೇ ಸಿಲುಕಿಕೊಂಡ ಪರಿಣಾಮ ಗ್ಯಾರೇಜ್ ಮತ್ತು ಅಂಗಡಿಗಳಲ್ಲಿದ್ದ ಗ್ರಾಹಕರು ಮತ್ತು ಮಾಲಕರು ಪಾರಾಗಿದ್ದಾರೆ.  

  ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಚಾಲಕ ಮೂಲ್ಕಿ ಮತ್ತು ಪಡುಬಿದ್ರಿ ಬಳಿ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆಯಿಸಿದ್ದ ಎನ್ನಲಾಗಿದೆ.   ಚಾಲಕರ ಸಮಯ ಪ್ರಜ್ಣೆಯಿಂದಾಗಿ ಎರಡು ಮೂರು ಅಪಘಾತಗಳು ತಪ್ಪಿವೆ ಎಂದು ಪ್ರತ್ಯಕ್ಷದರ್ಶಿ ವಾಹನ ಸವಾರರು ತಿಳಿಸಿದ್ದಾರೆ.

ಅಪಘಾತದ ಸಂದರ್ಭ ಹೆದ್ದಾರಿ ಸಂಚಾರದಲ್ಲಿ ವೃತ್ಯಯವುಂಟಾಗಿತ್ತು.

 ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.