ಪಡುಬಿದ್ರಿ: ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ತೀವ್ರ ಕಡಲ್ಕೊರೆತ, ರಸ್ತೆ ಕಟ್ ಭೀತಿ
ಪಡುಬಿದ್ರಿ: ಪಡುಬಿದ್ರಿ: ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ಗುರುವಾರ ತೀವ್ರ ಕಡಲ್ಕೋರೆತ ಉಂಟಾಗಿದ್ದು, ಮೀನುಗಾರಿಕಾ ರಸ್ತೆ ತುಂಡಾಗುವ ಭೀತಿ ಎದುರಾಗಿದೆ.
ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣ ದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಾರೀ ಕಡಲ್ಕೋರೆತ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸಂಪೂರ್ಣ ನಡಿಪಟ್ಣ ಗ್ರಾಮವೇ ಕಡಲಿನಬ್ಬರಕ್ಕೆ ತತ್ತರಿಸಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ.
ಈಗಾಗಲೇ ಸುಮಾರು 35 ತೆಂಗಿನ ಮರ ಮತ್ತು 1 ಮೀನುಗಾರಿಕಾ ಶೆಡ್ ಮತ್ತು ಒಂದು ಮೀನುಗಾರಿಕಾ ವಿಶ್ರಾಂತಿ ಗ್ರಹ ಕಡಲಿಗೆ ಆಹುತಿ ಆಗಿದೆ. ಈಗ ಮೀನುಗಾರಿಕಾ ಸಂಪರ್ಕ ರಸ್ತೆ ಮತ್ತು ಕಡಲಿಗಿರುವ ಅಂತರ ಕೇವಲ 10 ಫೀಟ್ ಮಾತ್ರ ಎಂದು ತಿಳಿದು ಬಂದಿದೆ.

