ಪಣಿಯೂರು: ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ
(Paniyooru) ಪಣಿಯೂರು: ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಪಣಿಯೂರಿನಲ್ಲಿರುವ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜರಗಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿಯವರು ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಳಪುವಿನಲ್ಲಿ ಆರಂಭ ಉಧ್ಯಮಗಳಲ್ಲಿ ಕುಲಾಲ ಸಮುದಾಯದವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವಂತೆ ಉಧ್ಯಮಿಗಳಿಗೆ ತಿಳಿಹೇಳಲಾಗುವುದು. ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳದ ವ್ಯವಸ್ಥೆಯನ್ನು ಮಾಡಿಕೊಡುದಾಗಿ ಭರವಸೆ ನೀಡಿದರು.
ಈ ಸಂದರ್ಬ ಬಾಲ ಪ್ರತಿಭೆ ಮನಸ್ವೀ ಕುಲಾಲ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸುಧಾಕರ್ ಕುಲಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಕುಟ್ಟಿ ಮೂಲ್ಯ, ಉಪಾಧ್ಯಕ್ಷ ಪ್ರಕಾಶ ಕುಲಾಲ್, ಸಂದೀಪ್ ಮೂಲ್ಯ, ಗೀತಾ Y, ಉಮೇಶ್ ಕುಲಾಲ್, ಜನಾರ್ದನ್ ಕುಲಾಲ್, ನಿತೇಶ್ ಕುಲಾಲ್ ಉಪಸ್ಥಿತರಿದ್ದರು.
ಕೊಶಾದಿಕಾರಿ ಹರೀಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು.
ಮಲ್ಲಿಕಾ ಉಮೇಶ್ ರವರು ಮಹಿಳಾ ಘಟಕದ ವರದಿಯನ್ನು ಮಂಡಿಸಿದರು.
ಸುಜಯ ಕುಲಾಲ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕುಂಜೂರು ನಿರೂಪಿಸಿದರು. ಪವಿತ್ರ ಕುಲಾಲ್ ವ೦ದಿಸಿದರು.

