• Home  
  • Breaking news…….. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ : ದೇಶ ತೊರೆದು ಪಲಾಯನ (Resignation from the post of Prime Minister of Bangladesh: Sheik Haseena fled the Country)
- ದೇಶ-ವಿದೇಶ - ರಾಜಕೀಯ

Breaking news…….. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ : ದೇಶ ತೊರೆದು ಪಲಾಯನ (Resignation from the post of Prime Minister of Bangladesh: Sheik Haseena fled the Country)

Share: ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ :   ದೇಶ ತೊರೆದು ಪಲಾಯನ (Bangladesh) ಡಾಕ: ಬಾಂಗ್ಲಾ ದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಈವರೆಗೆ 300ಕ್ಕೂ ಹೆಚ್ಚು ಜನರು ಪ್ರತಿಭಟನಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶದಿಂ ಸೇನಾ ಹೆಲಿಕ್ಯಾಪ್ಟರ್‌ ನಿಂದ ಪಲಾಯನ ಗೈದಿದ್ದಾರೆ.   ಜನವರಿಯಲ್ಲಿ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ […]

ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹುದ್ದೆಗೆ ರಾಜೀನಾಮೆ :   ದೇಶ ತೊರೆದು ಪಲಾಯನ

(Bangladesh) ಡಾಕ: ಬಾಂಗ್ಲಾ ದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಈವರೆಗೆ 300ಕ್ಕೂ ಹೆಚ್ಚು ಜನರು ಪ್ರತಿಭಟನಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶದಿಂ ಸೇನಾ ಹೆಲಿಕ್ಯಾಪ್ಟರ್‌ ನಿಂದ ಪಲಾಯನ ಗೈದಿದ್ದಾರೆ.  

ಜನವರಿಯಲ್ಲಿ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದ ಹಸೀನಾ ಅವರನ್ನು ಪದಚ್ಯುತಗೊಳಿಸುವ ಅಭಿಯಾನಕ್ಕೆ ಚಾಲನೆ ಸಿಕ್ಕು ಭಾರೀ ಪ್ರತಿಭಟನೆ ಆರಂಭವಾಗಿತ್ತು.

ಬಾಂಗ್ಲಾದೇಶದ ವಿದ್ಯಾರ್ಥಿಗಳು ಮೀಸಲಾತಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹತ್ತಿಕ್ಕಲು ಶೇಖ್‌ ಹಸೀನಾರವರು ಗೋಲಿಬಾರಿ ಆದೇಶಿಸಿದ್ದರು. ಇದರಿಂದ ನೂರಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯೂ ಇಂದಿನ ಘಟನೆಗೆ ಮೂಲವಾಗಿದೆ.

 170 ಮಿಲಿಯನ್ ಜನರಿರುವ ದೇಶಾದ್ಯಂತ ಭಾನುವಾರ ನಡೆದ ಹಿಂಸಾಚಾರದ ಅಲೆಯಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಬಳಸಿದ್ದಾರೆ.

 ಈ ಎಲ್ಲಾ ಕಾರಣದಿಂದಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಯನ್ನು ನೀಡಿ, ಢಾಕಾದಿಂದ ಭಾರತದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

 ಸದ್ಯ ಶೇಖ್ ಹಸೀನಾ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ತನ್ನ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಭಾರತದ ಅಗರ್ತಲಾಗೆ ಬಂದಿಳಿದಿದ್ದು, ಲಂಡನ್ ನತ್ತ ತೆರಳುವ ಸಾಧ್ಯತೆ ಇದೆ ಎಂದು CNN ವರದಿ ಮಾಡಿದೆ.

  ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಸಂಜೆ 4: 30 ರ ಸುಮಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

  ಸದ್ಯ ರಾಷ್ಟ್ರದ ಅಧಿಕಾರವನ್ನು ಸೇನೆಯೇ ವಹಿಸಿಕೊಳ್ಳಲು ಸಾಧ್ಯತೆ ಇದ್ದು, ಶೀಘ್ರವಾಗಿ ಸ್ವತಂತ್ರ ಸರಕಾರದ ರಚನೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.