ಎಸ್ಕೆಪಿಎ ಕಾಪು ವಲಯದ 33ನೇ ವಾರ್ಷಿಕ ಮಹಾಸಭೆ
(Kaup) ಕಾಪು : ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಕಾಪು ವಲಯದ 33ನೇ ವಾರ್ಷಿಕ ಮಹಾಸಭೆ ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ನೆರವೇರಿತು.
ಎಸ್ಕೆಪಿಎ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಭೆಯನ್ನು ಉದ್ಘಾಟಿಸಿದರು.
ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್, ಎಸ್.ಕೆ.ಪಿ.ಎ., ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ರವಿಕುಮಾರ್ ಕಟಪಾಡಿ, ಜಿಲ್ಲಾ ಕಟ್ಟಡ ಸಮಿತಿಯ ಪ್ರತಿನಿಧಿ ವಿನೋದ್ ಕಾಂಚನ್, ಕಾಪು ವಲಯದ ಗೌರವಾಧ್ಯಕ್ಷ ಕರುಣಾಕರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ವಲಯ ಉಪಾಧ್ಯಕ್ಷ ಸಂತೋಷ್ ಕಾಪು ಮತ್ತು ಸತೀಶ್ ಮೂಡಬೆಟ್ಟು, ಕೋಶಾಧಿಕಾರಿ ಕಿರಣ್ ಕಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಪು ವಲಯಾಧ್ಯಕ್ಷ ಸಚಿನ್ ಕುಮಾರ್ ಸ್ವಾಗತಿಸಿದರು. ಉದಯಕುಮಾರ್ ಮುಂಡ್ಕೂರು ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಭಟ್ ವಂದಿಸಿದರು.

