ಮೂಳೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಮಹಿಳಾ ಮಂಡಳಿಯಿಂದ ಆಟಿಕೂಟ
aati koota at mooluru billava sangha hall

ಮೂಳೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ.) ಮೂಳೂರು ಇಲ್ಲಿಯ ಮಹಿಳಾ ಮಂಡಲದ ವತಿಯಿಂದ ಇಲ್ಲಿಯ ಸಭಾಭವನದಲ್ಲಿ ಆಟಿಕೂಟ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಸಂತೋಷ್ ಮೂಳೂರುರವರ ಸಂಗ್ರಹದ ತುಳುನಾಡಿನ ಗತಕಾಲದ ಹಳೆಯ ಪರಿಕರಗಳ ಪ್ರದರ್ಶನವನ್ನು ಮೂಳೂರು ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಅಂಚನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ದೀಪಾ ಕೋಟ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಶ್ರೀಮತಿ ಸುಲೋಚನ ಬಂಗೇರ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಮೂಳೂರು ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಸದಸ್ಯರು ಮನೆಯಿಂದ ತಯಾರಿಸಿ ತಂದ ೨೫ಕ್ಕೂ ಅಧಿಕ ಆಟಿಯ ತಿನಿಸುಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ 400ಕ್ಕೂ ಅಧಿಕ ಅತಿಥಿಗಳಿಗೆ ಉಣಬಡಿಸಲಾಯಿತು.

