• Home  
  • ಕಂಚಿನಡ್ಕ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ: ಆ. 24 ರಂದು ಜನಾಂದೋಲನ ಸಭೆ: (Opposition to construction of Kanchinadka Tollgate : mass protest on 24th Aug)
- PROBLEMS - protest

ಕಂಚಿನಡ್ಕ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ: ಆ. 24 ರಂದು ಜನಾಂದೋಲನ ಸಭೆ: (Opposition to construction of Kanchinadka Tollgate : mass protest on 24th Aug)

Share: ಕಂಚಿನಡ್ಕ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ: ಆ. 24 ರಂದು ಜನಾಂದೋಲನ ಸಭೆ:  ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದ ಪ್ರಸ್ತಾವಿತ ಟೋಲ್‌ಗೇಟ್ ವಿರುದ್ಧ ಆಗಸ್ಟ್ 24ರಂದು ಶನಿವಾರ ಬೃಹತ್ ಜನಾಂದೋಲನ ಸಭೆ ನಡೆಸಲು ಪಡುಬಿದ್ರಿ-ಬೆಳ್ಮಣ್-ಕಾರ್ಕಳ ಟೋಲ್ ವಿರೋಧಿ ಹೋರಾಟ ಸಮಿತಿ ನಿರ್ಣಯಿಸಿದೆ.  ಕಂಚಿನಡ್ಕ ಟೋಲ್ ಪ್ರಸ್ತಾವಿತ ಸ್ಥಳದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟ ರೂಪುರೇಷೆಗಳ ಬಗ್ಗೆ  ಚರ್ಚಿಸಿ ತೀರ್ಮಾನಿಸಲಾಯಿತು. ಸಬೆಯಲ್ಲಿ ಆಗಸ್ಟ್ 24ರಂದು 10ಸಾವಿರ ಜನರನ್ನು ಸೇರಿಸಿ […]

ಕಂಚಿನಡ್ಕ ಟೋಲ್ಗೇಟ್ ನಿರ್ಮಾಣಕ್ಕೆ ವಿರೋಧ: ಆ. 24 ರಂದು ಜನಾಂದೋಲನ ಸಭೆ:

 ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದ ಪ್ರಸ್ತಾವಿತ ಟೋಲ್‌ಗೇಟ್ ವಿರುದ್ಧ ಆಗಸ್ಟ್ 24ರಂದು ಶನಿವಾರ ಬೃಹತ್ ಜನಾಂದೋಲನ ಸಭೆ ನಡೆಸಲು ಪಡುಬಿದ್ರಿ-ಬೆಳ್ಮಣ್-ಕಾರ್ಕಳ ಟೋಲ್ ವಿರೋಧಿ ಹೋರಾಟ ಸಮಿತಿ ನಿರ್ಣಯಿಸಿದೆ.

 ಕಂಚಿನಡ್ಕ ಟೋಲ್ ಪ್ರಸ್ತಾವಿತ ಸ್ಥಳದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟ ರೂಪುರೇಷೆಗಳ ಬಗ್ಗೆ  ಚರ್ಚಿಸಿ ತೀರ್ಮಾನಿಸಲಾಯಿತು.

ಸಬೆಯಲ್ಲಿ ಆಗಸ್ಟ್ 24ರಂದು 10ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

 ಅಂದು ಬೆಳಗ್ಗೆ ಕಂಚಿನಡ್ಕದಿಂದ ಪಡುಬಿದ್ರಿಯವರೆಗೆ ಜಾಥಾ ನಡೆಸಿ ಬೃಹತ್ ಸಂಖ್ಯೆ ನಡೆಸಿ ಸಭೆ ನಡೆಸಲಾಗುವುದು. ಪಡುಬಿದ್ರಿಯಿಂದ ಕಾರ್ಕಳದವರೆಗಿನ ಎಲ್ಲಾ ಜನರನ್ನು ಪ್ರತಿಭಟನೆಗೆ ಸೇರಿಸಿಕೊಳ್ಳಲಾಗುವುದು. ಅದುವರೆಗೆ ಪ್ರತಿನಿತ್ಯ ಟೋಲ್ ಪ್ರಸ್ತಾವಿತ ಸ್ಥಳದಲ್ಲಿ ಜನರು ಸೇರಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಜನಾಂದೋಲನ ಸಭೆಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ನೀಡಲಾಯಿತು.

 ಪಡುಬಿದ್ರಿ ಎಸ್.ಐ ಪ್ರಸನ್ನ ಎಂ.ಎಸ್. ಮತ್ತು ಸಿಬ್ಬಂದಿ ಬಂದೋಬಸ್ತು ವಹಿಸಿದ್ದರು.

ಈ ಸಂದರ್ಭ ಟೋಲ್ ವಿರೋಧ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ, ನವೀನ್ ಚಂದ್ರ ಜೆ. ಶೆಟ್ಟಿ ಅಶೋಕ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ರೇಶ್ಮಾಉದಯ ಶೆಟ್ಟಿ, ರಮಾನಾಥ್ ಶೆಟ್ಟಿ, ಮಿಥುನ್ ಆರ್. ಹೆಗ್ಡೆ, ಅನ್ಸಾರ್ ಅಹಮದ್‌, ವೈ ಸುಕುಮಾರ್, ಉದಯಕುಮಾರ್‌ ಶೆಟ್ಟಿ ಇನ್ನ, ರವಿ ಶೆಟ್ಟಿ, ನವೀನ್ ಎನ್. ಶೆಟ್ಟಿ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಪಲಿಮಾರು, ಶಶಿಕಾಂತ್ ಪಡುಬಿದ್ರಿ, ದೀಪಕ್ ಕಾಮತ್ ಕಾಂಜರಕಟ್ಟೆ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ನಿಯಾಝ್, ಲಕ್ಷ್ಮಣ ಎಲ್. ಶೆಟ್ಟಿ, ಎಂ.ಎಸ್. ಮನ್ಸೂರ್  ನೂರಾರು ಪ್ರತಿಭಟನಾಕಾರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.