ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್ ಪದಗ್ರಹಣ
(Udupi) ಉಡುಪಿ: ರೋಟರಿ ಕ್ಲಬ್ ಉಡುಪಿ ಪ್ರಾಯೋಜಿತ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭವು ಯು. ಕಮಲಾಬಾಯಿ ಹೈಸ್ಕೂಲ್, ಕಡಿಯಾಳಿಯಲ್ಲಿ ನೆರವೇರಿತು.
ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷ ಪ್ರಣವ್ ಮತ್ತು ಕಾರ್ಯದರ್ಶಿ ಪವಿತ್ರ ಅವರಿಗೆ ಪದಪ್ರಧಾನ ನೆರವೇರಿಸಿ ಶುಭಹಾರೈಸಿದರು.
ನಿಕಟಪೂರ್ವ ಅಧ್ಯಕ್ಷೆ ಚೈತ್ರ ಸ್ವಾಗತಿಸಿದರು. ಇಂಟರಾಕ್ಟ್ ಸಭಾಪತಿ ರೋ. ಸಾಧನಾ ಮುಂಡ್ಕೂರು ಶುಭ ಹಾರೈಸಿದರು.
ಮಾಜಿ ಅಸಿಸ್ಟೆಂಟ್ ಗವರ್ನರ್ ರೋ ಡಾ. ಗಣೇಶ್ ಅವರು ಜಲಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್, ಶಿಕ್ಷಕ ಸಂಯೋಜಕ ಜಗದೀಶ್, ರೋಟರಿ ಉಡುಪಿಯ ರೋ. ರಾಮಚಂದ್ರ ಉಪಾಧ್ಯಾಯ, ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ರೋ. ಶುಭಲಕ್ಷ್ಮಿ ಭಟ್ ಉಪಸ್ಥಿತರಿದ್ದರು.
ಇಂಟರಾಕ್ಟರ್ ರಂಜನ್ ಧನ್ಯವಾದ ಸಮರ್ಪಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

