• Home  
  • ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್ (Teachers should be open to new tccnology : Dr. Ashok Kamath)
- ಸಂಘ, ಸಂಸ್ಥೆಗಳು

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್ (Teachers should be open to new tccnology : Dr. Ashok Kamath)

Share: ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್  (Udupi): ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ ಜಂಟಿ ಆಶ್ರಯದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್‌ ಮಾತನಾಡುತ್ತಾ, ಶಿಕ್ಷಕರು ಬದಲಾಗುವ ಪರಿಸ್ಥಿತಿ ಯಲ್ಲಿ ತಮ್ಮನ್ನುಒಗ್ಗಿಸಿಕೊಂಡು ಸೂಕ್ತ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ಕರೆ ನೀಡಿದರು. ಉಡುಪಿ ಡಯಟ್ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಾ […]

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್

 (Udupi): ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ ಜಂಟಿ ಆಶ್ರಯದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್‌ ಮಾತನಾಡುತ್ತಾ, ಶಿಕ್ಷಕರು ಬದಲಾಗುವ ಪರಿಸ್ಥಿತಿ ಯಲ್ಲಿ ತಮ್ಮನ್ನುಒಗ್ಗಿಸಿಕೊಂಡು ಸೂಕ್ತ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ಕರೆ ನೀಡಿದರು.

ಉಡುಪಿ ಡಯಟ್ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಾ ಇದೆ. ಅದರ ಸಂಪೂರ್ಣ ಉಪಯೋಗ ಪಡೆಯುವಂತೆ ತಿಳಿಸಿದರು.

ಪ್ರಾರಂಭದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಸುರೇಖ ಕಲ್ಕೂರ್ ಸ್ವಾಗತಿಸಿದರು.

ಸೋದೆ ವಾದಿರಾಜ ಮಠ ಟ್ರಸ್ಟ್ ನ ಕಾರ್ಯದರ್ಶಿ ರತ್ನಕುಮಾರ್ ಅವರು ಉದ್ಘಾಟಿಸಿ, ರೋಟರಿಯು ಇಂತಹ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಅಭಿನಂದಿಸಿ ಇದರ ಸಂಪೂರ್ಣ ಸದುಪಯೋಗ ಪಡೆಯುವಂತೆ ಹೇಳಿದ್ದಾರೆ.

ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ ಸಹಕರಿಸಿದ ಎಲ್ಲರನ್ನೂ ಅಭಿವಂಧಿಸಿ ಭವಿಷ್ಯದ ಪ್ರಜೆಗಳನ್ನು ಹೊಸ ತಂತ್ರಜ್ಞಾನದಲ್ಲಿ ಪರಿಣಿತರಾಗುವಂತೆ ಮಾಡುವ ನಮ್ಮ ಪ್ರಯತ್ನದಲ್ಲಿ ಎಲ್ಲರು ಸಹಕರಿಸಬೇಕೆಂದು ಹೇಳಿದರು.

 ವಲಯ ಸೇನಾನಿ ಹೇಮಂತಕಾಂತ್ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ ದನ್ಯವಾದ ಸಮರ್ಪಿಸಿದರು. ರೋ. ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

 ಶ್ರೀಮತಿ ಶಬನಮ್ ಪ್ರವೀಣ್ ಶೇಖ್ ಅವರು ಇಂಗ್ಲೀಷ್ ವಿಷಯದ ಬಗ್ಗೆ ಗಣೇಶ್ ಶಟ್ಟಿಗಾರ್ ಗಣಿತದ ಬಗ್ಗೆ ಮತ್ತು ಡಯಟ್ ನ ಉಪನ್ಯಾಸಕ ಯೋಗನಾರಸಿಂಹರವರು ಶಿಕ್ಷಣದಲ್ಲಿ ತಂತ್ರಜ್ಞಾನ ದ ಉಪಯೋಗದ ಬಗ್ಗೆ ತರಬೇತಿ ನೀಡಿದರು.

 ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ರೂಪಾ ಕಿಣಿಯವರು ಮಾತನಾಡಿ, ಭಾಗವಹಿಸಿದ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ತರಬೇತಿಯ ಸಂಪೂರ್ಣ ಉಪಯೋಗ ಪಡೆದು ರೋಟರಿಯ ಈ ಪ್ರಯತ್ನದ ಯಶಸ್ಸಿನಲ್ಲಿ ಸಹಕರಿಸಬೇಕೆಂದರು.

 ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಅನಂತರಾಮ ಬಲ್ಲಾಳ, ಸುಬ್ರಹ್ಮಣ್ಯ ಕಾರಂತ್,  ಪದ್ಮಿನಿ ಭಟ್, ಶುಭ ಬಾಸ್ರಿ, ಸಾದನಾ ಮುಂಡ್ಕೂರ್, ವನಿತಾ ಉಪಾಧ್ಯಾಯ, ಶಾಲಿನಿ ರಾಘವೇಂದ್ರ ಮತ್ತು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.