ನಾರಾವಿ: ಸಿಡಿಲಿಗೆ ಮನೆ, ಕೃಷಿ ತೋಟಕ್ಕೆ ಹಾನಿ, ಲಕ್ಷಾಂತರ ರೂ. ನಷ್ಠ
(Belthangadi) ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಮನೆಗೆ ಹಾಗೂ ತೋಟಕ್ಕೆ ಸಿಡಿಲು ಬಡಿದು ಮನೆಯವರು ಅಪಾಯದಿಂದ ಪಾರಾದ ಘಟನೆ ಘಟಿಸಿದೆ.
ರಾತ್ರಿ ಬಡಿದ ಸಿಡಿಲಿಗೆ ನಾರಾವಿ ವೈಶಾಲಿ ಪರಿಸರದ ನಾರಾಯಣ ಬಂಗೇರ ಅವರ ಮನೆಗೆ ಹಾಗೂ ತೋಟಕ್ಕೆ ಹಾನಿ ಉಂಟಾಗಿದೆ. ಮನೆಯಲ್ಲಿ ತಾಯಿ ಮಗಳು ಮಾತ್ರ ಇದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಸಿಡಿಲಿನ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಮಳೆಯಿಂದ ಕಂಗು ತೋಟಕ್ಕೂ ಹಾನಿಯಾಗಿದ್ದು, ಈ ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

