ಹೆಜಮಾಡಿ ಅಲಡೆಯಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆ
(Hejamadi) ಹೆಜಮಾಡಿ: ಹೆಜಮಾಡಿಯ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಅಲಡೆಯ ಸಮಗ್ರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಪೂರ್ವಕ ಮುಷ್ಟಿಕಾಣಿಕೆ ಸಮರ್ಪಣೆ ಭಾನುವಾರ ಭಕ್ತಾದಿಗಳ ಕೂಡುವಿಕೆಯೊಂದಿಗೆ ಸಂಪನ್ನಗೊಂಡಿತು.
ತಂತ್ರಿಗಳಾದ ವೇದಮೂರ್ತಿ ವಾದಿರಾಜ ಉಪಾಧ್ಯಾಯರವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮುಷ್ಟಿ ಕಾಣಿಕೆ ಸಮರ್ಪಣೆಗೆ ಚಾಲನೆ ನೀಡಲಾಯಿತು.
ಕ್ಷೇತ್ರದ ಅರ್ಚಕ ಶ್ರೀನಿವಾಸ ಭಟ್ ಧಾರ್ಮಿಕ ವಿಧಿಗಳನ್ನು ಪೂರೈಸಿದರು.
ಈ ಸಂದರ್ಭ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಹೆಜಮಾಡಿ ಗ್ರಾಮ ದೇವಳ ಶ್ರೀ ಮಹಾಲಿಂಗೇಶ್ವರ ದೇವಳದ ಅಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಆಲಡೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ, ಮಾಜಿ ಅಧ್ಯಕ್ಷ ಲೋಕೇಶ್ ಅಮೀನ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಶಿಲ್ಪಿ ಸುಬ್ರಹ್ಮಣ್ಯ ಕುಕ್ಕುಂದೂರು, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಎ. ಮೆಂಡನ್, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಅರುಣ್ ಶೆಟ್ಟಿ ಪಡುಮನೆ, ಶಿವರಾಮ ಶೆಟ್ಟಿ ಮಟ್ಟಿಮನೆ, ಪ್ರಬೋದ್‌ಚಂದ್ರ ದೊಡ್ಡಮನೆ, ಶರಣ್‌ಕುಮಾರ್ ಮಟ್ಟು, ದೊಂಬ ಪೂಜಾರಿ, ಹೇಮಾನಂದ ಕೆ. ಪುತ್ರನ್, ಗಣೇಶ್ ಕೋಟ್ಯಾನ್ ಪಡುಬಿದ್ರಿ, ಜಿನರಾಜ್ ಬಂಗೇರ, ಕಿಶೋರ್ ಶೆಟ್ಟಿ ಮುಂಬೈ, ವಸಂತಿ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

