• Home  
  • ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024” ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ (“Kadal Fish -2024” National Level Cricket Match at Padubidri)
- ಕ್ರೀಡೆ

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024” ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ (“Kadal Fish -2024” National Level Cricket Match at Padubidri)

Share: ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ  ಕ್ರೀಡಾ ಮನೋಭಾವ  ಬದುಕಿನಲ್ಲಿರಲಿ : ನವೀನಚಂದ್ರ ಜೆ ಶೆಟ್ಟಿ (Padubidri) ಪಡುಬಿದ್ರಿ : “ಕ್ರೀಡಾ ಸ್ಪೂರ್ತಿಯ ಗುಣ ಲಕ್ಷಣಗಳನ್ನು  ದೈನಂದಿನ ಜೀವನಕ್ಕೆ ಅನ್ವಯಿಸಿದರೆ  ಮೈದಾನ ಮತ್ತು ಬದುಕಿನಲ್ಲಿ ಯಶಸ್ವಿಗೆ ಕಾರಣವಾಗುತ್ತದೆ. ಉತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವುದು ಒಬ್ಬ ನಾಯಕನ ಯಶಸ್ವಿನ ಗುಣಲಕ್ಷಣವಾಗಿದೆ. ಆಟಗಾರರು ತೀರ್ಪುಗಾರರಿಕೆಗೆ ಗೌರವ ಸಲ್ಲಿಸುವುದರ ಮೂಲಕ ಪ್ರೀತಿ , ಸೌಹಾರ್ದತೆ […]

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದಕಡಲ್ ಫಿಶ್ – 2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ

 ಕ್ರೀಡಾ ಮನೋಭಾವ  ಬದುಕಿನಲ್ಲಿರಲಿ : ನವೀನಚಂದ್ರ ಜೆ ಶೆಟ್ಟಿ

(Padubidri) ಪಡುಬಿದ್ರಿ : “ಕ್ರೀಡಾ ಸ್ಪೂರ್ತಿಯ ಗುಣ ಲಕ್ಷಣಗಳನ್ನು  ದೈನಂದಿನ ಜೀವನಕ್ಕೆ ಅನ್ವಯಿಸಿದರೆ  ಮೈದಾನ ಮತ್ತು ಬದುಕಿನಲ್ಲಿ ಯಶಸ್ವಿಗೆ ಕಾರಣವಾಗುತ್ತದೆ. ಉತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವುದು ಒಬ್ಬ ನಾಯಕನ ಯಶಸ್ವಿನ ಗುಣಲಕ್ಷಣವಾಗಿದೆ. ಆಟಗಾರರು ತೀರ್ಪುಗಾರರಿಕೆಗೆ ಗೌರವ ಸಲ್ಲಿಸುವುದರ ಮೂಲಕ ಪ್ರೀತಿ , ಸೌಹಾರ್ದತೆ ಪಂದ್ಯಕೂಟವಾಗಲಿ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ  ನವೀನಚಂದ್ರ ಜೆ ಶೆಟ್ಟಿ ಹೇಳಿದರು.

   ಅವರು ಪಡುಬಿದ್ರಿ ಕಡಲ್ ಫಿಶ್ ಕ್ರಿಕೆಟರ್ಸ್‌  ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ  ಮೈದಾನದಲ್ಲಿ”ಕಡಲ್ ಫಿಶ್ 2024″ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಹೊನಲು ಬೆಳಕಿನ ಪಂದ್ಯ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

    ಕಡಲ್ ಫಿಶ್ ಕ್ರಿಕೆಟರ್ಸ್‌ ಸ್ಥಾಪಕ ಅಧ್ಯಕ್ಷ  ಚೇತನ್ ಕುಮಾರ್  ಪಡುಬಿದ್ರಿ ಅಧ್ಯಕ್ಷತೆ ವಹಿಸಿದರು.

  ಶ್ರೀಲಂಕಾ  ಹಾಗೂ ಭಾರತ ಟೆನ್ನಿಸ್ ಬಾಲ್ ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು.

ಪಡುಬಿದ್ರಿ ಗ್ರಾ.ಪಂ.ಉಪಾಧ್ಯಕ್ಷ ವೈ ಸುಕುಮಾರ್,  ಕಲ್ಲಟೆ ಶ್ರೀ ಧರ್ಮ ಜಾರಂದಯಾ ಸೇವಾ ಸಮಿತಿ ಅಧ್ಯಕ್ಷ  ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವ‌ ಅಧ್ಯಕ್ಷ ಶರತ್ ಶೆಟ್ಟಿ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಅಧ್ಯಕ್ಷ ವಿಶ್ವಾಸ್ ಅಮೀನ್, ಸುರತ್ಕಲ್ ತುಳುನಾಡ ಬಿರುವರ್ ಸಂಸ್ಥಾಪಕ ಲೊಕೇಶ್ ಕೊಡಿಕೆರೆ ಪಡುಬಿದ್ರಿ ಬಂಟರ ಸಂಘ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು,  ಕಾಪು ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ‌ಶೆಟ್ಟಿ, ರಾಷ್ಟ್ರೀಯ ಕ್ರೀಡಾ ಪಟು ಪುಂಡಲೀಕ ‌ಹೊಸಬೆಟ್ಟು,  ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಾಜಿ ನಿರ್ದೇಶಕ ಮಿಥುನ್ ಹೆಗ್ಡೆ, ಪಡುಬಿದ್ರಿ ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಪೂಜಾರಿ, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ಉದ್ಯಮಿ ಅಶ್ವಿನ್ ಕೋಟ್ಯಾನ್, ಕಡಲ್ ಫಿಶ್ ಕ್ರಿಕೆಟರ್ಸ್‌ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ‌ರಚನ್ ಸಾಲ್ಯಾನ್, ಬಾಡಿ ಬಿಲ್ಡರ್ ವಿರಾಜ್ ಸುರತ್ಕಲ್, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರೇಮ ವಾಸುದೇವ್ ಉಪಸ್ಥಿತರಿದ್ದರು.

   ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು. ಪ್ರಶಾಂತ್ ಸಾಲ್ಯಾನ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.