ಹೆಜಮಾಡಿ: ಮೀನುಗಾರಿಕೆಗೆ ತೆರಳಲು ಸಜ್ಜಾಗಿದ್ದ ಇಬ್ಬರು ಯುವಕರು ಸಮುದ್ರಪಾಲು, ಓರ್ವನ ರಕ್ಷಣೆ
(Padubidri) ಪಡುಬಿದ್ರಿ: ಮೀನುಗಾರಿಕೆಗೆ ತೆರಳಲು ಸಜ್ಜಾಗಿದ್ದ ಇಬ್ಬರು ಯುವಕರು ಸಮುದ್ರ ಪಾಲಾದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಸಮುದ್ರದಲ್ಲಿ ಸಂಭವಿಸಿದೆ.
ನೀರುಪಾಲಾಗಿದ್ದ ಮೂವರ ಪೈಕಿ ಓರ್ವನನ್ನು ರಕ್ಷಣೆ ಮಾಡಲಾಗಿದೆ. ಸಮುದ್ರ ಪಾಲಾದ ವ ದುರ್ದೈವಿಗಳನ್ನು ಅಕ್ಷಯ್ (19) ಮತ್ತು ಚಿರಾಗ್ (19) ಎಂದು ಗುರುತಿಸಲಾಗಿದೆ.
ಮೂವರನ್ನೂ ನೀರಿನಿಂದ ಮೇಲಕ್ಕೆತ್ತಿ ಮಂಗಳೂರಿನ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಬ್ಬರು ಯುವಕರು ಸಾವನ್ನಪ್ಪಿದ್ದಾನೆಂದು ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
ಹೆಜಮಾಡಿ ಸಮುದ್ರ ತೀರಕ್ಕೆ ಮೀನುಗಾರಿಕೆಗೆಂದು ಅಕ್ಷಯ್ ಮತ್ತು ಚಿರಾಗ್ ಸಹಿತ 6 ಮಂದಿ ತೆರಳಿದ್ದು, ಇವರಲ್ಲಿ ಓರ್ವ ಸಮುದ್ರಕ್ಕೆ ಇಳಿಯುತ್ತಿದ್ದಂತೆ ನೀರಿನಲ್ಲಿ ಸಿಲುಕಿದ್ದು, ಆ ವೇಳೆ ಇನ್ನೇನು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯಲು ತಯಾರಾಗಿದ್ದ. ಉಳಿದ ಐವರಲ್ಲಿ ಇಬ್ಬರು ರಕ್ಷಣೆಗೆ ಮುಂದಾಗುತ್ತಾರೆ. ನೀರಲ್ಲಿದ್ದ ಮೂವರಲ್ಲಿ ಓರ್ವ ಬದುಕುಳಿದಿದ್ದು, ಅಕ್ಷಯ್ ಮತ್ತು ಚಿರಾಗ್ ಸಮುದ್ರ ಪಾಲಾಗಿದ್ದಾರೆ.
ಇವರು ಹೆಜಮಾಡಿಯ ನಿವಾಸಿಗಳಾಗಿದ್ದು, ಕಾರ್ಕಳದ ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

