ಮೂಳೂರಿನಲ್ಲಿ ಅಕ್ರಮ ಮರಳು, ಸೊತ್ತು ಸಹಿತ ನಾಲ್ವರು ಪೊಲೀಸ್ ವಶ
(Kaup) ಕಾಪು : ಮೂಳೂರು ಗ್ರಾಮದ, ಎಸ್.ಎಸ್ ರಸ್ತೆಯ ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಕಾಪು ಪೊಲೀಸರು ನಾಲ್ಕು ಜನರು ಕೂಲಿಯಾಳುಗಳು, 30,000 ಮೌಲ್ಯದ 12 ಟನ್ ಮರಳು, ಲಾರಿ, ಹಿಟಾಚಿಯನ್ನು ಬುಧವಾರ ಬೆಳಗ್ಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಕಾಪು ಪೊಲೀಸರು ಮೂಳೂರು ಸಮುದ್ರ ಬದಿಗೆ ತಲುಪಿದಾಗ ಸ್ಥಳದಲ್ಲಿ ಮರಳನ್ನು ತುಂಬಿಸಿ, ಲಾರಿಯ ಮೇಲ್ಭಾಗವನ್ನು ಮರಳು ಕಾಣದಂತೆ ಮರೆಮಾಚಲು ತರ್ಪಾಲ್ ನಿಂದ ಮುಚ್ಚುತ್ತಿರುವ ಐದು ಜನರು ಕಂಡುಬಂದಿದ್ದಾರೆ. ಪೊಲೀಸರನ್ನು ಕಂಡ ಓರ್ವ ಅಲ್ಲಿಂದ ಓಡಿ ಹೋಗಿದ್ದು, ಉಳಿದ 4 ಜನರನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

