• Home  
  • ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ Tootedaara program at Udupi Kemthur Sri Vishnu Murthy Temple Fair)
- ವಿಡಿಯೋ

ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ Tootedaara program at Udupi Kemthur Sri Vishnu Murthy Temple Fair)

Share: ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ (Udupi) ಉಡುಪಿ : ತುಳುನಾಡು ದೇವರು, ದೈವಾರಾಧನೆಯ ತವರು. ಇಲ್ಲಿಯದ್ದೇ ಆದ ಹತ್ತು ಹಲವು ಆಚರಣೆಗಳು ಇಲ್ಲಿವೆ. ದೇವಸ್ಥಾನಗಳ ಮತ್ತು ದೈವಸ್ಥಾನಗಳ ಜಾತ್ರಾ ಸಂದರ್ಭ ತೂಟೆದಾರ ಆಚರಣೆ ವಿಶಿಷ್ಠವಾಗಿದೆ.   ಉಡುಪಿಯ ಕೆಮ್ತೂರು ಶ್ರೀ ವಿಷ್ಣು ಮೂರ್ತಿ  ದೇವರ ಕಟ್ಟೆ ಪೂಜೆಯ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ ಎಂಬ ವಿಶಿಷ್ಟ ಆಚರಣೆ ನಡೆಯುತ್ತಿದ್ದು, ತೆಂಗಿನ ಗರಿಯನ್ನು ಕಟ್ಟುಗಳನ್ನಾಗಿ ಮಾಡಿ, ಅದಕ್ಕೆ ಬೆಂಕಿ ಕೊಟ್ಟು ಎಸೆಯುವ […]

ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ

(Udupi) ಉಡುಪಿ : ತುಳುನಾಡು ದೇವರು, ದೈವಾರಾಧನೆಯ ತವರು. ಇಲ್ಲಿಯದ್ದೇ ಆದ ಹತ್ತು ಹಲವು ಆಚರಣೆಗಳು ಇಲ್ಲಿವೆ. ದೇವಸ್ಥಾನಗಳ ಮತ್ತು ದೈವಸ್ಥಾನಗಳ ಜಾತ್ರಾ ಸಂದರ್ಭ ತೂಟೆದಾರ ಆಚರಣೆ ವಿಶಿಷ್ಠವಾಗಿದೆ.

  ಉಡುಪಿಯ ಕೆಮ್ತೂರು ಶ್ರೀ ವಿಷ್ಣು ಮೂರ್ತಿ  ದೇವರ ಕಟ್ಟೆ ಪೂಜೆಯ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ ಎಂಬ ವಿಶಿಷ್ಟ ಆಚರಣೆ ನಡೆಯುತ್ತಿದ್ದು, ತೆಂಗಿನ ಗರಿಯನ್ನು ಕಟ್ಟುಗಳನ್ನಾಗಿ ಮಾಡಿ, ಅದಕ್ಕೆ ಬೆಂಕಿ ಕೊಟ್ಟು ಎಸೆಯುವ ಪ್ರಕ್ರಿಯೆ. ಇದು ದೇವರ ಉತ್ಸವದ ಕಡೆಯ ಪ್ರಕ್ರಿಯೆಯಾಗಿ ಕಂಡು ಬರುತ್ತದೆ.   ಇದನ್ನೇ ತುಳುವರು ತೂಟೆದಾರ ಎನ್ನುತ್ತಾರೆ.

ಜನರು ಎರಡು ಗುಂಪುಗಳಾಗಿ ಪರಸ್ಪರ ಗುಂಪಾಗಿ  ಕತ್ತಲಲ್ಲಿ ಬೆಂಕಿಯ ಚೆಂಡುಗಳು ಗದ್ದೆಯಲ್ಲಿ ಇತ್ತಿಂದತ್ತ ಅತ್ತಿಂದತ್ತ ಎಸೆಯುತ್ತಾರೆ. ಇದನ್ನು ನೋಡಲೆಂದೇ ನೂರಾರು ಭಕ್ತಾದಿಗಳು ಸೇರುತ್ತಾರೆ.

ಕರಾವಳಿ ಜನರು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ, ತನ್ನ ಮೂಲ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.