ಮೂಳೂರು ಪಡು : ಯುವ ಗೆಳೆಯರ ಬಳಗ 35ನೇ ವಾರ್ಷಿಕೋತ್ಸವ
(Mooluru) ಮೂಳೂರು: ದೇಶವನ್ನು ಸ್ವಾತಂತ್ರ್ಯಗೊಳಿಸುವುದು ಕಷ್ಟವಲ್ಲ. ಮುಂದಿನ ನೂರಾರು ವರ್ಷಗಳ ಕಾಲ ಸ್ವಾತಂತ್ರ್ಯವನ್ನು ಇರಿಸಿ, ಗುಲಾಮಗಿರಿಗೆ ಹೋಗದಂತೆ ಸಮಾಜವನ್ನು ಸಿದ್ಧಪಡಿಸುವುದು ಮಹತ್ವದ ಕೆಲಸ ಎಂದು ಹಲವು ಸ್ವಾತಂತ್ರ್ಯ ಹೋರಾಟಗಾರ ಅಭಿಮತವಾಗಿತ್ತು. ಸಂಘ ಸಂಸ್ಥೆಗಳು ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದತೆ, ಸಾಮರಸ್ಯ ಉದ್ದೀಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ವಾಗ್ಮಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ಅವರು ಯುವ ಗೆಳೆಯರ ಬಳಗ ಮೂಳೂರು ಪಡು ಇದರ 35ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಚಲನಚಿತ್ರ, ರಂಗ ನಟ ಗೋಪಿನಾಥ್ ಹಳೆಯಂಗಡಿ ಉದ್ಘಾಟಿಸಿ, ಮಾತನಾಡಿ, ಸಂಸ್ಥೆಯಲ್ಲಿ ಹಣವಿದ್ದರೆ ಘರ್ಷಣೆ ಸಾಧ್ಯ. ಇದರಿಂದ ಸಂಸ್ಥೆಯ ಬೆಳವಣಿಗೆ ಅಸಾಧ್ಯ. ಯುವ ಗೆಳೆಯರ ಬಳಗದ 35 ವರ್ಷಗಳಿಂದ ಜನಮೆಚ್ಚಿದ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಮುಳೂರು ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಎಮ್ ಅಬ್ಬು ಮೊಹಮ್ಮದ್, ರಂಗಕರ್ಮಿ ಡಾ.ಭರತ್ ಕುಮಾರ್ ಪೊಲಿಪು ಮಾತನಾಡಿದರು.
ಯುವ ಗೆಳೆಯರ ಬಳಗದ ಅಧ್ಯಕ್ಷ ಮಧು ಆರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ/ ಬಹುಮಾನ ವಿತರಣೆ : ಚಲನಚಿತ್ರ, ರಂಗ ನಟ ಗೋಪಿನಾಥ್ ಹಳೆಯಂಗಡಿಯವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಚಂದ್ರಕಾಂತ್ ಮೆಂಡನ್, ಪ್ರಕಾಶ್ ಅಂಚನ್, ಕಿಶೋರ್ ಎಸ್ ಸುವರ್ಣ, ಉಮೇಶ್ ಎಲ್ ಪೂಜಾರಿ, ನವೀನ್ ಡಿ ಪುತ್ರನ್, ಉದ್ಯಮಿ ನಿತಿನ್ ಎನ್ ಪುತ್ರನ್ ಉಪಸ್ಥಿತರಿದ್ದರು.
ಆಕಾಶ್ ಡಿ ಕೋಟ್ಯಾನ್ ಪ್ರಾರ್ಥಿಸಿದರು. ಸುಕೇಶ್ ಕೆ ಅಮೀನ್ ಸ್ವಾಗತಿಸಿದರು. ಪ್ರಜ್ಞ ಸಿ ಕರ್ಕೇರ ವರದಿ ವಾಚಿಸಿದರು. ಜಯಲಕ್ಷ್ಮಿ ಬಹುಮಾನಿತರ ಪಟ್ಟಿ ವಾಚಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ರಾಜೇಶ್ ಎಸ್ ಕೋಟ್ಯಾನ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯನ, ನೃತ್ಯ ಮತ್ತು ಕಾಪು ರಂಗ ತರಂಗ ಕಲಾವಿದರು ಅಭಿನಯಿಸಿದ ಕುಟ್ಯಣ್ಣನ ಕುಟುಂಬ ತುಳು ನಾಟಕ ಪ್ರದರ್ಶನಗೊಂಡಿತು.

