• Home  
  • ವೈ. ಕೆ. ಸಂಧ್ಯಾ ಶರ್ಮ “ಕಲಾ ಪ್ರವೀಣ” ಪ್ರಶಸ್ತಿಗೆ  ಆಯ್ಕೆ (Y. K. Sandhya Sharma selected for the “Kala Praveen” award)
- CONGARTULATIONS - ಸಂಘ, ಸಂಸ್ಥೆಗಳು

ವೈ. ಕೆ. ಸಂಧ್ಯಾ ಶರ್ಮ “ಕಲಾ ಪ್ರವೀಣ” ಪ್ರಶಸ್ತಿಗೆ  ಆಯ್ಕೆ (Y. K. Sandhya Sharma selected for the “Kala Praveen” award)

Share: ವೈ. ಕೆ. ಸಂಧ್ಯಾ ಶರ್ಮ “ಕಲಾ ಪ್ರವೀಣ” ಪ್ರಶಸ್ತಿಗೆ  ಆಯ್ಕೆ (Udupi) ಉಡುಪಿ: ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮ ಅವರು 2025ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣʼಪ್ರಶಸ್ತಿಗೆ  ಆಯ್ಕೆಯಾಗಿರುತ್ತಾರೆ.   ಇವರು ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ  ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು  ಸಂಗೀತ ವಿಮರ್ಶೆಯಲ್ಲೂ […]

(Udupi) ಉಡುಪಿ: ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮ ಅವರು 2025ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣʼಪ್ರಶಸ್ತಿಗೆ  ಆಯ್ಕೆಯಾಗಿರುತ್ತಾರೆ.

  ಇವರು ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ  ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು  ಸಂಗೀತ ವಿಮರ್ಶೆಯಲ್ಲೂ ಪಳಗಿದವರು.

ಕನ್ನಡ ಎಂ.ಎ ಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರು, ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ  ಸಲ್ಲಿಸಿದ್ದಾರೆ.  ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ  ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 55 ವರ್ಷಗಳಿಂದ ಸಾಹಿತ್ಯಕೃಷಿ  ನಡೆಸುತ್ತಾ 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಖ್ಯಾತಿ ಇವರಿಗಿದೆ. ಜನಪ್ರಿಯ ಲೇಖಕಿಯಾದ ಇವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 950 ಕ್ಕೂ ಮಿಗಿಲಾದ ನಾಟಕ-ನೃತ್ಯ-ಸಂಗೀತ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡ ಹಿರಿಮೆ ಇವರದ್ದು.

ಆಕಾಶವಾಣಿ  ಮತ್ತು ದೂರದರ್ಶನದಲ್ಲೂ ಮಾನ್ಯತೆ ಪಡೆದ ಕಲಾವಿದೆ ಇವರು. ಕಳೆದ 48 ವರ್ಷಗಳಿಂದ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ‘ಸಂಧ್ಯಾ ಪತ್ರಿಕೆ’ ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ. ಇವರ ಸಾಹಿತ್ಯ ಸಾಧನೆಗೆ  ಸಂದ  ಪ್ರಶಸ್ತಿಗಳು ಅನೇಕ. ‘ಕಲಾವಿಹಾರಿ’ ಶ್ರೀಯುತ ಎ.ಈಶ್ವರಯ್ಯ  ಅವರ ಹೆಸರನಲ್ಲಿ ಅವರ ಕುಟುಂಬವು ರಾಗ ಧನ ಉಡುಪಿ ಸಂಸ್ಥೆಯ ಮೂಲಕ ವರ್ಷಪ್ರತಿ ಕೊಡಮಾಡುವ ‘ಕಲಾ ಪ್ರವೀಣʼ ಪ್ರಶಸ್ತಿಗೆ ಈ ಬಾರಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅವರು ಆಯ್ಕೆಯಾಗಿರುತ್ತಾರೆ ಎಂದು ಈಶ್ವರಯ್ಯ ಅನಂತಪುರ ಅವರ ಸಹೋದರ ಕೃಷ್ಣಯ್ಯ ಅನಂತಪುರ, ಮಗ ಶೈಲೇಂದ್ರ ಅನಂತಪುರ ಮತ್ತು ಕುಟುಂಬದವರು  ತಿಳಿಸಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.