ಮಲ್ಪೆ ಬೀಚ್ ಬಳಿ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ, ಲಕ್ಷಾಂತರ ರೂ ನಷ್ಠ
(Malpe)ಮಲ್ಪೆ: ಹೊಟೇಲಿಗೆ ಬೆಂಕಿ ತಗಲಿ ಲಕ್ಷಾಂತರ ರೂ ನಷ್ಠ ಸಂಭವಿಸಿದ ಘಟನೆ ಮಲ್ಪೆ ಬೀಚ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊಟೆಲಿಗೆ ಬೆಂಕಿ ತಗಲಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸಚಿನ್ ಎಂವರಿಗೆ ಸೇರಿದ ಹೊಟೇಲು ಇದಾಗಿದ್ದು, ಸುಮಾರು 15 ಲಕ್ಷ ರೂಪಾಯಿ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ.
ಐದು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ವ್ಯಾಪಾರಕ್ಕಾಗಿ ತಣದ ದಿನಸಿ ಬೆಂಕಿಗೆ ಆಹುತಿಯಾಗಿದೆ. ಹೋಟೆಲಿಗೆ ಬೀಗ ಹಾಕಿ ಸಚಿನ್‌ರವರು ಮನೆಗೆ ತೆರಳಿದ್ದು, ಪ್ರಿಡ್ಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲಾ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಆಗಮಿಸಿ, ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಬೆಂಕಿ ನಂದಿಸುವಲ್ಲಿ ಯಶ ಸಾಧಿಸಿದ್ದಾರೆ.
ಮಲ್ಪೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

