ಎಲ್ಲೂರು : ಖಾಸಗಿ ಕಂಪನಿ ನೌಕರ ಹೃದಯಾಘಾತದಿಂದ ಮೃತ್ಯು
(Padubidri) ಪಡುಬಿದ್ರಿ : ಎಲ್ಲೂರು ಗ್ರಾಮದಲ್ಲಿರುವ “ಪವರ್ ಮೆಕ್” ಇಂಡಸ್ಟ್ರಿ ಪ್ರೈವೆಟ್ ಲಿಮಿಟೆಡ್ ಕಂಪೆನಿಯಲ್ಲಿ ಕಾರ್ಮಿಕನಾಗಿದ್ದ ವ್ಯಕ್ತಿಯೋರ್ವ ಕುಸಿದು ಬಿದ್ದ ಘಟನೆ ಭಾನುವಾರ ರಾತ್ರಿ ಘಟಿಸಿದೆ.
ಪಂಜಾಬ್ ಮೂಲದ ಅಮರ್‌ಜೀತ್ ಸಿಂಗ್ (49) ಎಂಬವರು ಕೆಲಸ ಮುಗಿಸಿ ಕಂಪನಿಯ ಸ್ಟೋರ್ ರೂಮ್ ಬಳಿ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು.
ತೀವ್ರ ಅಸ್ವಸ್ಥಗೊಂಡ ಅವರನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮುಕ್ಕ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅಲ್ಲಿನ ವೈದ್ಯರು ಅಮರ್‌ಜೀತ್ ಸಿಂಗ್ ಮೃತ ಘೋಷಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

