• Home  
  • ಹೆಜಮಾಡಿ : ದೇಶದ ಮೊದಲ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ಲೋಕಾರ್ಪಣೆ (Hejamadi: Country’s first EV Highway Patrol Rajmarg Saathi unveiled)
- Uncategorised - ತಂತ್ರಜ್ಞಾನ

ಹೆಜಮಾಡಿ : ದೇಶದ ಮೊದಲ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ಲೋಕಾರ್ಪಣೆ (Hejamadi: Country’s first EV Highway Patrol Rajmarg Saathi unveiled)

Share:  ಹೆಜಮಾಡಿ : ದೇಶದ ಮೊದಲ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ಲೋಕಾರ್ಪಣೆ (Hejamadi) ಹೆಜಮಾಡಿ: ಹೆದ್ದಾರಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ತಲಪಾಡಿವರೆಗೆ ರಸ್ತೆ ನಿರ್ವಹಣೆಗಾಗಿ ಕೆ.ಕೆ.ಆರ್. ಹೈವೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಉಡುಪಿ ಟೋಲ್‌ವೇ ವತಿಯಿಂದ 3 ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ರಾಷ್ಟ್ರೀಯ   ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಆಜ್ಮಿ ಲೋಕಾರ್ಪಣೆಗೊಳಿಸಿದರು. ಹೆಜಮಾಡಿ ಟೋಲ್ ಪ್ಲಾಝಾ ಬಳಿ ಶುಕ್ರವಾರ ನಡೆದ ಸರಳ […]

(Hejamadi) ಹೆಜಮಾಡಿ: ಹೆದ್ದಾರಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ತಲಪಾಡಿವರೆಗೆ ರಸ್ತೆ ನಿರ್ವಹಣೆಗಾಗಿ ಕೆ.ಕೆ.ಆರ್. ಹೈವೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಉಡುಪಿ ಟೋಲ್‌ವೇ ವತಿಯಿಂದ 3 ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ರಾಷ್ಟ್ರೀಯ   ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಆಜ್ಮಿ ಲೋಕಾರ್ಪಣೆಗೊಳಿಸಿದರು.

ಹೆಜಮಾಡಿ ಟೋಲ್ ಪ್ಲಾಝಾ ಬಳಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದಾದ್ಯಂತ ಹೆದ್ದಾರಿ ಸುವ್ಯವಸ್ಥೆಗಾಗಿ ರಾಜ್‌ಮಾರ್ಗ್ ಸಾಥಿ ರಸ್ತೆ ಗಸ್ತು ವಾಹನವನ್ನು ಬಿಡುಗಡೆಗೊಳಿಸಲಾಗಿದ್ದು, ಪ್ರಥಮ ಬಾರಿಗೆ ಉಡುಪಿ ಟೋಲ್‌ವೇ ಕಂಪನಿ ಮೂಲಕ ಮೂರು ವಾಹನಗಳನ್ನು ಪರಿಚಯಿಸಲಾಗಿದೆ. ಸಾಸ್ತಾನ, ಹೆಜಮಾಡಿ ಮತ್ತು ತಲಪಾಡಿ ಟೋಲ್ ಪ್ಲಾಝಾ ಮೂಲಕ ಇವುಗಳು ಕಾರ್ಯಾಚರಿಸಲಿವೆ ಎಂದರು.

ಸರ್ವ ಸುಸಜ್ಜಿತ ರಾಜ್‌ಮಾಗ್ ಸಾಥಿ ಇಡೀ ದಿನ ನಿರ್ದಿಷ್ಟ ಸಮಯಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿ ರಸ್ತೆ ಹೊಂಡ, ರಸ್ತೆ ಅಡೆತಡೆಗಳನ್ನು ಗುರುತಿಸಿ ತಕ್ಷಣ ತೆರವು ಮಾಡಿ ಸುಗಮ ಸಂಚಾರ ವ್ಯವಸ್ಥೆ ಮಾಡಿಕೊಡುವುದು ವಾಹನದ ಕೆಲಸವಾಗಿದೆ. ಪ್ರತಿದಿನವೂ ಸಂಚರಿಸಿ ರಸ್ತೆಗಳ ಸ್ಥಿತಿಗತಿ ಮೇಲ್ವಿಚಾರಣೆ ನಡೆಸಿ, ಸ್ವತಃ ದುರಸ್ತಿ ನಡೆಸಿ ಜತೆಗೆ ಸಂಬಂಧಪಟ್ಟವರಿಗೆ ವರದಿ ಮಾಡಲಿದೆ.

ಲೋಕಾರ್ಪಣೆ ಸಂದರ್ಭ ಹೆದ್ದಾರಿ ಪ್ರಾಧಿಕಾರದ ಟೆಕ್ನಿಕಲ್ ಮ್ಯಾನೇಜರ್ ಕೆ. ಚಂದ್ರಶೇಖರ್, ಐ.ಇ. ಜ್ಞಾನೇಂದರ್ ಸಾಹು, ಎ.ಐ. ನವೀನ್, ಕೆಕೆಆರ್ ಟೋಲ್ ಪ್ಲಾಝಾದ ಉಪಾಧ್ಯಕ್ಷ ಅಣ್ಣಾಮಲೈ ಮುತ್ತು, ಪ್ರಾಜೆಕ್ಟ್ ಕೋರ್ಡಿನೇಟರ್ ಆಶೀಲ್ ಪಾಟೀಲ್, ಪ್ರಾಜೆಕ್ಟ್ ಮ್ಯಾನೇಜರ್ ರೀತಮ್ ಗಂಗೂಲಿ, ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ.ಎಸ್. ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.