• Home  
  • ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamadi toll problem; Gram Panchayat removes barrier erected on public road)
- PROBLEMS

ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamadi toll problem; Gram Panchayat removes barrier erected on public road)

Share: ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamady) ಹೆಜಮಾಡಿ: ಹೆಜಮಾಡಿ ಗ್ರಾಮ ಪಂಚಾಯತ್ ಮತ್ತು ಟೋಲ್ ಗೇಟ್ ಮಧ್ಯೆ ನಡೆದ ವಿವಾದ ಈಗ ತಾರಕಕ್ಕೇರಿದ್ದು, ಗುರುವಾರ ಬೆಳಿಗ್ಗೆ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತ್ ಜಪ್ತಿ ಮಾಡಿದೆ. ಘಟನೆಯ ವಿವರ : ಹೆಜಮಾಡಿ ಟೋಲ್ ಪ್ಲಾಜಾವನ್ನು ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು […]

(Hejamady) ಹೆಜಮಾಡಿ: ಹೆಜಮಾಡಿ ಗ್ರಾಮ ಪಂಚಾಯತ್ ಮತ್ತು ಟೋಲ್ ಗೇಟ್ ಮಧ್ಯೆ ನಡೆದ ವಿವಾದ ಈಗ ತಾರಕಕ್ಕೇರಿದ್ದು, ಗುರುವಾರ ಬೆಳಿಗ್ಗೆ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತ್ ಜಪ್ತಿ ಮಾಡಿದೆ.

ಘಟನೆಯ ವಿವರ : ಹೆಜಮಾಡಿ ಟೋಲ್ ಪ್ಲಾಜಾವನ್ನು ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು ಕಡೆಗಣನೆ ಮಾಡುತ್ತಿದ್ದು, ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವ ಕಾರಣ ಸೋಮವಾರ ಹೆಜಮಾಡಿ ಗ್ರಾಮ ಪಂಚಾಯತ್ ಆಡಳಿತ ತೀವ್ರ ಪ್ರತಿಭಟನೆ ನಡೆಸಿದೆ. ಇದೇ ಸಂದರ್ಭ ಹೆಜಮಾಡಿಯ ಟೋಲ್ ಗೇಟ್ ಬಳಿಯ ಖಾಸಗಿ ಜಾಗದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನ ಸವಾರರಿಗೆ ಅವಕಾಶ ಮಾಡಿ ಕೊಟ್ಟಿತ್ತು. ಇದರಿಂದ ನೂರಾರು ವಾಹನಗಳು ಟೋಲ್ ಭರಿಸದೆ ಈ ರಸ್ತೆಯಲ್ಲಿ ಸಂಚರಿಸಿದೆ.

 ಈ ಪ್ರಕರಣವು ಜಿಲ್ಲಾಧಿಕಾರಿಯವರ ಅಂಗಳಕ್ಕೆ ತೆರಳಿದ್ದು, ಮೇಲಾಧಿಕಾರಿಯವರ ಆದೇಶ ಬರುವ ತನಕ ಯಥಾಸ್ಥಿತಿ ಕಾಪಾಡುವಂತೆ ಇತ್ತಂಡಗಳಿಗೂ ಅವರು ಸಲಹೆ ನೀಡಿದ್ದಾರೆ.

 ಗುರುವಾರ ಬೆಳಿಗ್ಗೆ ಹೆಜಮಾಡಿ ಟೋಲ್ ಪ್ಲಾಜಾದ ಅಧಿಕಾರಿ ತಿಮ್ಮಯ್ಯ ಘಟನಾ ಸ್ಥಳಕ್ಕೆ ಆಗಮಿಸಿ, ರಸ್ತೆ ನಿರ್ಮಾಣ ಮಾಡಿದ ಜಾಗದಲ್ಲಿ ಸಿಮೆಂಟು ಕಲ್ಲು ದಂಡೆ ಹಾಗೂ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ಶಾಶ್ವತ ರಸ್ತೆ ಸಂಚಾರ ಮಾಡದಂತೆ ಪ್ರಯತ್ನ ಪಟ್ಟಿದ್ದಾರೆ.

 ಮಾಹಿತಿ ತಿಳಿದ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಘಟನಾ ಸ್ಥಳಕ್ಕೆ ಆಗಮಿಸಿ, ಯಾವುದೇ ಕಾಮಗಾರಿ ಮಾಡದಂತೆ ತಡೆದಿದ್ದಾರೆ. ಮುಂದುವರಿದು ಟೋಲ್ ಗೇಟ್ ಸಿಬ್ಬಂದಿಯವರು ಶಾಶ್ವತ ರಸ್ತೆ ತಡೆಗಾಗಿ ತಂದಿದ್ದ ಸೊತ್ತುಗಳನ್ನು ಜಪ್ತಿ ಮಾಡಿ ಗ್ರಾ.ಪಂ.ಗೆ ಸಾಗಿಸಿದ್ದಾರೆ.

 ಇದೇ ಸಂದರ್ಭ ಗ್ರಾಮ ಪಂಚಾಯತ್ ಮತ್ತು ಟೋಲ್ ಅಧಿಕಾರಿಯವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಘಟನಾ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು, ಜಿಲ್ಲಾಧಿಕಾರಿ ಆದೇಶದಂತೆ ಯಥಾಸ್ಥಿತಿ ಕಾಪಾಡುವಂತೆ ಇತ್ತಂಡಗಳಿಗೆ ತಾಕೀತು ಮಾಡಿದರು.

ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್‌  ಅಧ್ಯಕ್ಷೆ  ರೇಷ್ಮಾ ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಪಂಚಾಯತ್ ಸದಸ್ಯರಾದ ಶರಣ್ ಕುಮಾರ್ ಮಟ್ಟು, ಪ್ರಾಣೇಶ್ ಹೆಜಮಾಡಿ, ಪ್ರಸಾದ್, ಕಬೀರ್, ಜನಾರ್ಧನ್ ಕೋಟ್ಯಾನ್, ಪವಿತ್ರ ಗಿರೀಶ್,  ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧಾಕರ ಕರ್ಕೇರ, ಎಚ್ ರವಿ, ಲೋಕೇಶ್ ಅಮೀನ್, ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.