ಮಜೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ ಹಲವು ಮನೆಗಳ ನೀರು ಕಲುಷಿತ, ಶಾಸಕರು, ತಹಶಿಲ್ದಾರ್ ಭೇಟಿ
( Majuru)ಮಜೂರು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ 8 ಬಾವಿಗಳ ನೀರು ಕಲುಷಿತಗೊಂಡು ನೀರಿನ ಬಣ್ಣ ಬದಲಾಗಿ ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಾಪು ತಹಶೀಲ್ದಾರರಾದ ಪಡಾ. ಪ್ರತಿಭಾ ಆರ್ ರವರು ಇಂದು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರು ಹಾಗೂ ಮಣ್ಣಿನ ಪರೀಕ್ಷೆ ನಡೆಸಿ ಶೀಘ್ರವೇ ಕಲುಷಿತಗೊಳ್ಳಲು ಕಾರಣವಾಗ ಅಂಶಗಳನ್ನು ಪತ್ತೆಹಚ್ಚುವಂತೆ ಜೊತೆಗೆ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮತ್ತು ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಗ್ರೌಂಡ್ ವಾಟರ್ ಹಾಗೂ ಪೊಲ್ಯುಷನ್ ಬೊರ್ಡ್ ಅಧಿಕಾರಿಗಳು, ಪಂಜಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಜೂರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

