• Home  
  • ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Rotary Club Katapady: Asha Anchan appointed as President, team takes oath)
- social service - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Rotary Club Katapady: Asha Anchan appointed as President, team takes oath)

Share:  ರೋಟರಿ ಕ್ಲಬ್ ಕಟಪಾಡಿ : ಅಧ್ಯಕ್ಷರಾಗಿ ಆಶಾ ಅಂಚನ್, ತಂಡದ ಪದಗ್ರಹಣ (Katapadi) ಕಟಪಾಡಿ, ಜು.11 : ರೋಟರಿ ಕ್ಲಬ್ ಕಟಪಾಡಿ ಇದರ 24ನೇ ವರ್ಷದ 25-26 ರ ಸಾಲಿನ ನೂತನ ಅಧ್ಯಕ್ಷರಾಗಿ ಆಶಾ ಅಂಚನ್ ಹಾಗೂ ತಂಡದ ಪದಗ್ರಹಣ ಸಮಾರಂಭ ಕಟಪಾಡಿ ಎಸ್‌ವಿಎಸ್ ಕಾಲೇಜು ಅಡಿಟೋರಿಯಂನಲ್ಲಿ ನಡೆಯಿತು. ಪದಪ್ರಧಾನ ಅಧಿಕಾರಿಯಾಗಿದ್ದ 2026-27 ರ ಸಾಲಿನ ಜಿಲ್ಲಾ ಗವರ್ನರ್ ಬಿ.ಎಂ. ಭಟ್‌ ಪದಪ್ರಧಾನ ನಡೆಸಿ, ಲವಲವಿಕೆ ಉತ್ಸಾಹೀ ಅಧ್ಯಕ್ಷರಾಗಿ ಆಶಾ ಅಂಚನ್ ಯಶಸ್ವಿ ಕ್ಲಬ್ ಆಗಿಸಲಿದ್ದಾರೆ […]

(Katapadi) ಕಟಪಾಡಿ, ಜು.11 : ರೋಟರಿ ಕ್ಲಬ್ ಕಟಪಾಡಿ ಇದರ 24ನೇ ವರ್ಷದ 25-26 ರ ಸಾಲಿನ ನೂತನ ಅಧ್ಯಕ್ಷರಾಗಿ ಆಶಾ ಅಂಚನ್ ಹಾಗೂ ತಂಡದ ಪದಗ್ರಹಣ ಸಮಾರಂಭ ಕಟಪಾಡಿ ಎಸ್‌ವಿಎಸ್ ಕಾಲೇಜು ಅಡಿಟೋರಿಯಂನಲ್ಲಿ ನಡೆಯಿತು.

ಪದಪ್ರಧಾನ ಅಧಿಕಾರಿಯಾಗಿದ್ದ 2026-27 ರ ಸಾಲಿನ ಜಿಲ್ಲಾ ಗವರ್ನರ್ ಬಿ.ಎಂ. ಭಟ್‌ ಪದಪ್ರಧಾನ ನಡೆಸಿ, ಲವಲವಿಕೆ ಉತ್ಸಾಹೀ ಅಧ್ಯಕ್ಷರಾಗಿ ಆಶಾ ಅಂಚನ್ ಯಶಸ್ವಿ ಕ್ಲಬ್ ಆಗಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ವಲಯ ಸೇನಾನಿ ಸ್ಮಿತಾ ಕಾಮತ್, ಸಹಾಯಕ ಗವರ್ನರ್ ಅಮಿತ್ ಅರವಿಂದ್ ಸ್ಪಂದನ ಸಂಚಿಕೆ ಬಿಡುಗಡೆ ಮಾಡಿದ ಶುಭ ಹಾರೈಸಿದರು.

ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

2 ವೀಲ್ ಚೆಯರ್ ಕೊಡುಗೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ನೂತನ 3 ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ನಿರ್ಗಮನ ಸಹಾಯಕ ಗವರ್ನರ್ ಜಗನ್ನಾಥ ಕೋಟೆ, ನಿರ್ಗಮನ ವಲಯ ಸೇನಾನಿ ಹೇಮಂತ್ ಯು. ಕಾಂತ್, ಕಾರ್ಯದರ್ಶಿ ಲಕ್ಷ್ಮೀ ಬಿ. ವೇದಿಕೆಯಲ್ಲಿದ್ದರು.

ನಿರ್ಗಮನ ಅಧ್ಯಕ್ಷ ಸುನಿಲ್ ಡಿ. ಬಂಗೇರ ಸ್ವಾಗತಿಸಿದರು. ಗಿರಿಧರ್ ಶೆಟ್ಟಿ, ವಿಲ್ರೆಡ್ ಲೂಯಿಸ್, ಗಣೇಶ್ ಕಿಣಿ, ಸಂತೋಷ್ ಶೆಟ್ಟಿ, ವೈ.ರಂಜನ್ ಹೆಗ್ಡೆ ಪರಿಚಯಿಸಿದರು. ಕಾರ್ಯದರ್ಶಿ ಡಾ. ಚಂದ್ರಶೇಖರ್ ಸಾಲಿಮಠ್ ವಂದಿಸಿದರು. ರಿತೇಶ್ ಕೋಟ್ಯಾನ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.