• Home  
  • ಉಚ್ಚಿಲ ಬಸ್ಸು ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಹೃದಯಾಘಾತಕ್ಕೆ ಬಲಿ (A middle-aged man died of a heart attack near Uchchila bus stand)
- health - PROBLEMS

ಉಚ್ಚಿಲ ಬಸ್ಸು ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಹೃದಯಾಘಾತಕ್ಕೆ ಬಲಿ (A middle-aged man died of a heart attack near Uchchila bus stand)

Share: ಉಚ್ಚಿಲ ಬಸ್ಸು ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಹೃದಯಾಘಾತಕ್ಕೆ ಬಲಿ (Uchila) ಉಚ್ಚಿಲ : ರಿಕ್ಷಾದಿಂದ ಇಳಿದು ಬಸ್ಸು ನಿಲ್ದಾಣಕ್ಕೆ ಬರುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಘಟಿಸಿದೆ.  ಮೃತ ವ್ಯಕ್ತಿಯನ್ನುಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ, ಕುರ್ಕಾಲು ನೂಜಿ ಹೊಸಮನೆ ನಿವಾಸಿ ಜಗದೀಶ್ ಶೆಟ್ಟಿ (೫೭) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಉದ್ಯೋಗಕ್ಕೆ ತೆರಳಲೆಂದು ರಿಕ್ಷಾದಿಂದ ಆಗಮಿಸಿದ ಜಗದೀಶ್ ಶೆಟ್ಟಿಯವರು, ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿ ಬರುತ್ತಿದ್ದಂತೆ  ಹೃದಯಾಘಾತದಿಂದಾಗಿ ಅಲ್ಲೇ ಕುಸಿದು […]

(Uchila) ಉಚ್ಚಿಲ : ರಿಕ್ಷಾದಿಂದ ಇಳಿದು ಬಸ್ಸು ನಿಲ್ದಾಣಕ್ಕೆ ಬರುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಘಟಿಸಿದೆ.

 ಮೃತ ವ್ಯಕ್ತಿಯನ್ನುಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ, ಕುರ್ಕಾಲು ನೂಜಿ ಹೊಸಮನೆ ನಿವಾಸಿ ಜಗದೀಶ್ ಶೆಟ್ಟಿ (೫೭) ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಿಗ್ಗೆ ಉದ್ಯೋಗಕ್ಕೆ ತೆರಳಲೆಂದು ರಿಕ್ಷಾದಿಂದ ಆಗಮಿಸಿದ ಜಗದೀಶ್ ಶೆಟ್ಟಿಯವರು, ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿ ಬರುತ್ತಿದ್ದಂತೆ  ಹೃದಯಾಘಾತದಿಂದಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.

ಜಗದೀಶ್ ಶೆಟ್ಟಿಯವರನ್ನು ಸ್ಥಳೀಯ ರಿಕ್ಷಾ ಚಾಲಕರು  ಪ್ರಾಥಮಿಕ ಚಿಕಿತ್ಸೆ ನೀಡಿ ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಯ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮೃತರು ನವೋದಯ ಸ್ವಸಹಾಯ ಗುಂಪಿನ ಪ್ರೇರಕಿ ಮಮತಾ ಶೆಟ್ಟಿ, ಓರ್ವ ಮಗಳು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.

ಸಂತಾಪ: ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ ಎನ್‌ ರಾಜೇಂದ್ರ ಕುಮಾರ್‌, ಬೆಳಪು ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.